ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಪಿಎಲ್‌ ಜನತೆಗೆ 35 ಕೆಜಿ ದವಸ ಧಾನ್ಯ:ಮೊಂಟೆಕ್ (Montek Singh Ahluwalia | Planning Commission | Food security law)
Bookmark and Share Feedback Print
 
ಪ್ರಸ್ತುತ ಸಂಸತ್ತಿನಲ್ಲಿ ಮಂಡಿಸಲಾಗಿರುವ ಅಹಾರ ಭಧ್ರತೆ ಕಾಯ್ದೆಯನ್ವಯ,ಬಡತನದ ರೇಖೆಗಿಂತ ಕೆಳಗಿರುವ ಜನತೆ 25 ಕೆಜಿ ಅಹಾರ ಧಾನ್ಯಗಳ ಬದಲಿಗೆ ಪ್ರತಿ ಕೆಜಿ 3ರೂಪಾಯಿಗಳಂತೆ 35 ಕೆಜಿ ಅಹಾರಧಾನ್ಯಗಳನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಅಹಾರ ಭಧ್ರತೆ ಕಾಯ್ದೆಯನ್ವಯ ಅಹಾರ ಧಾನ್ಯಗಳನ್ನು 25ಕೆಜಿ ಯಿಂದ 35 ಕೆಜಿಗೆ ಏರಿಕೆ ಮಾಡುವುದು ಸೂಕ್ತವಲ್ಲ.ಸರಕಾರಕ್ಕೆ ತುಂಬಾ ಹೊರೆಯಾಗುತ್ತದೆ. ಆದರೆ ಬಡಜನತೆಗೆ ವಿತರಿಸುತ್ತಿರುವುದುರಿಂದ ಪೂರಕವಾಗಿದೆ ಎಂದು ಮೊಂಟೆಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿ ತಿಂಗಳು ಭತ್ತ ಮತ್ತು ಗೋಧಿಯನ್ನು ವಿತರಿಸುತ್ತಿರುವ ಬಡತನದ ರೇಖೆಗಿಂತ ಕೆಳಗಿರುವ ಜನತೆಯ ಬಗ್ಗೆ ನಿರ್ಧಿಷ್ಠ ವಿವರಣೆಗಳನ್ನು ನೀಡುವಂತೆ ಅಧಿಕಾರಯುತ ಸಚಿವರ ಗುಂಪು, ಕೇಂದ್ರ ಯೋಜನಾ ಆಯೋಗಕ್ಕೆ ಆದೇಶಿಸಿದೆ.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಅಹಾರಧಾನ್ಯಗಳನ್ನು 35ಕೆಜಿ ಏರಿಕೆ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡುವಂತೆ ಆದೇಶಿಸಿದ್ದರಿಂದ, ಮಾರ್ಚ್ 18 ರಂದು ಮಸೂದೆಗೆ ಸಚಿವ ಸಂಪುಟ ಸಮ್ಮತಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ