ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹುಂಡೈನಿಂದ ಐ20 ಮಾಡೆಲ್‌ ಕಾರು ಮಾರುಕಟ್ಟೆಗೆ (Era|Hyundai Motor India Ltd|i20 car|Sportz)
Bookmark and Share Feedback Print
 
ಜಾಗತಿಕ ವಾಹನೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಎರಾ ಮತ್ತು ಸ್ಪೋರ್ಟ್ಜ್‌ ಐ20 ಮಾಡೆಲ್‌ಗಳ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, 4.51-5.31ಲಕ್ಷ ರೂಪಾಯಿಗಳ ದರವನ್ನು ನಿಗದಿಪಡಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನೂತನ ವೈಶಿಷ್ಯಗಳನ್ನು ಹೊಂದಿದ ಐ20 ಮಾಡೆಲ್‌ಗಳ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವುದಕ್ಕೆ ಸಂತೋಷವಾಗಿದೆ. ನೂತನ ವಿಶೇಷತೆಗಳಿಂದ ಗ್ರಾಹಕರ ಬಯಕೆಗಳನ್ನು ಈಡೇರಿಸಿದಂತಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಡಬ್ಲೂ ಪಾರ್ಕ್ ಹೇಳಿದ್ದಾರೆ.

ನೂತನ ಐ20 ಮಾಡೆಲ್ ಡೀಸೆಲ್‌ ಕಾರುಗಳು ಇಂಧನ ಮಿತುವ್ಯಯಿಯಾಗಿದ್ದು, ಆರು ಗೇರ್‌ಗಳನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಐ20 ಕಾರಿನಲ್ಲಿ ಸ್ವಯಂಚಾಲಿತ ತಾಪಮಾನ ನಿಯಂತ್ರಕವನ್ನು ಹೊಂದಿದ್ದು, ಇತರ ಹಲವು ವಿಶೇಷತೆಗಳನ್ನು ಅಳವಡಿಸಲಾಗಿದೆ ಎಂದು ಕಂಪೆನಿಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಡಬ್ಲೂ ಪಾರ್ಕ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ