ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೆನ್ಸೆಕ್ಸ್ ಏರಿಕೆ: ಬಿಲಿಯನೇರ್‌ಗಳ ಆಸ್ತಿಯಲ್ಲಿ ಬರೀ ಇಳಿಕೆ! (Billionaire | Wipro | Azim Premji | Mukesh Ambani | Reliance)
Bookmark and Share Feedback Print
 
ಷೇರು ಮಾರುಕಟ್ಟೆ ದಿಢೀರನೆ ಕಳೆದೆರಡು ವರ್ಷಗಳ ಹಿಂದೆ ಇದ್ದ 18,000ದ ಗಡಿ ತಲುಪಿ ಸುದ್ದಿಯಾಗುತ್ತಿದ್ದಂತೆ ಬಿಲಿಯನೇರ್‌ಗಳ ಆಸ್ತಿ ವೃದ್ಧಿಯಾದ ಬಗ್ಗೆಯೂ ಉದ್ಯಮ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರ ನಡೆಯುತ್ತಿದೆ. 2008ರ ಫೆಬ್ರವರಿ 1ರಲ್ಲಿ ಸೆನ್ಸೆಕ್ಸ್ ಇದೇ ಮಿತಿಯಲ್ಲಿದ್ದಾಗ ಬಿಲಿಯನೇರ್‌ಗಳ ಆಸ್ತಿ ಮೊತ್ತಕ್ಕಿಂತ ಈಗ ಎರಡು ವರ್ಷದ ನಂತರ ಅಂತ ಏರಿಕೆಯನ್ನೇನೂ ದಾಖಲಿಸಿಲ್ಲ ಎಂಬುದು ಉದ್ಯಮ ಪಂಡಿತರ ಅಭಿಪ್ರಾಯ.

2008ರ ಫೆಬ್ರವರಿ 1ರಂದು ಸೆನ್ಸೆಕ್ಸ್ 18,242.6ಕ್ಕೆ ತಲುಪಿದ್ದ ಸೂಚ್ಯಂಕ ಮತ್ತೆ ಏರಲೇ ಇಲ್ಲ. ಇಳಿಕೆಯ ಹಾದಿಯಲ್ಲೇ ಇದ್ದ ಸೂಚ್ಯಂಕ ಎರಡು ವರ್ಷಗಳ ನಂತರ ಇದೀಗ ಏ.7ರಂದು 18,000ದ ಗಡಿ ತಲುಪಿದೆ. ಅಜೀಂ ಪ್ರೇಮ್‌ಜೀ ಆಸ್ತಿಯಲ್ಲಿ ಏರಿಕೆಯಾದರೆ, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಆಸ್ತಿಯಲ್ಲಿ ಕುಸಿತವಾಗಿದೆ.

2008ರಲ್ಲಿ ಸೆನ್ಸೆಕ್ಸ್ ಉಛ್ರಾಯ ಸ್ಥಿತಿಯಲ್ಲಿದ್ದಾಗ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಆವರ ಆಸ್ತಿ ಈಗ ಶೇ.63.6ರಷ್ಟು ವೃದ್ಧಿಯಾಗಿ 83,109.4 ಕೋಟಿ ರೂಪಾಯಿಗಳಿಗೆ ತಲುಪಿದೆ. ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ 1.72 ಲಕ್ಷ ಕೋಟಿ ರೂಪಾಯಿಗಳಿದ್ದು, ಇದು 2008ರ ಫೆಬ್ರವರಿ ತಿಂಗಳಲ್ಲಿ ಇದ್ದ ಆಸ್ತಿಗಿಂತ ಕಡಿಮೆ. ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.51.3ರಿಂದ ಶೇ.46.5ಕ್ಕೆ ಇಳಿದಿರುವುದು ಈ ಕುಸಿತಕ್ಕೆ ಕಾರಣ ಎಂದು ಲೆಕ್ಕಾಚಾರ ಹಾಕಲಾಗಿದೆ.

ಅನಿಲ್ ಅಂಬಾನಿ ಆಸ್ತಿಯ ಮೌಲ್ಯ 2008ಕ್ಕಿಂತ ಕಡಿಮೆಯಾಗಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಪವರ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಕಂಪನಿಗಳ ಒಟ್ಟು ಮೊತ್ತ 73,305 ಕೋಟಿ ರೂಪಾಯಿಗಳು. ಆದರೆ ಎರಡು ವರ್ಷಗಳ ಹಿಂದೆ ಇವರ ಒಡೆತನದ ಮೂರು ಕಂಪನಿಗಳ ಒಟ್ಟು ಆಸ್ತಿ 1.8 ಲಕ್ಷ ಕೋಟಿ ರೂಪಾಯಿಗಳಿತ್ತು.

ಸುನಿಲ್ ಮಿತ್ತಲ್ ಅವರ ಆಸ್ತಿ ಕಳೆದ ಎರಡು ವರ್ಷಗಳಲ್ಲಿ ಶೇ.27.2ರಷ್ಟು ಕುಸಿದಿದೆ. ಕುಮಾರ ಮಂಗಳಂ ಬಿರ್ಲಾರ ಆಸ್ತಿಯೂ ಕೊಂಚ ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ