ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐ20 ಕಾರಿನ ಬೆಲೆ ಕಡಿತ ಗೊಳಿಸಿದ ಹುಂಡೈ (Hyundai i20 | Volkswagen Polo | GM Beat | Ford Figo)
Bookmark and Share Feedback Print
 
ಕಾರು ಮಾರುಕಟ್ಟೆಯಲ್ಲಿ ಪ್ರಭುತ್ವ ಹೊಂದಿರುವ ಹುಂಡೈ ಸಂಸ್ಥೆ ಇದೀಗ ತನ್ನ ಹೊಸ ಐ20 ಕಾರಿನ ಬೆಲೆಯನ್ನು ಇಳಿಸುವುದು ಅನಿವಾರ್ಯವೆಂದುಕೊಂಡಂತಿದೆ. ವೋಕ್ಸ್ವೋಗನ್‌ನ ಪೋಲೋ, ಜಿಎಂನ ಬೀಟ್, ಫೋರ್ಡ್‌ನ ಫಿಗೋ ಕಾರುಗಳು ತಮ್ಮ ದೊಡ್ಡ ಗಾತ್ರ ಹಾಗೂ ಕಡಿಮೆ ಬೆಲೆಯ ಮೂಲಕ ಜನರನ್ನು ಆಕರ್ಷಿಸುತ್ತಿದ್ದರೆ, ಹುಂಡೈ ಐ20 ಕಾರಿನ ಬೆಲೆ ಹೆಚ್ಚು ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಎಡವುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಹುಂಡೈ ಇದೀಗ ಈಗಾಗಲೇ ಬಿಡುಗಡೆ ಮಾಡಿರುವ ಐ20 ಕಾರುಗಳ ಜೊತೆಗೆ ಎರಡು ಬೇರೆ ಮಾದರಿಯ ಹುಂಡೈ ಕಾರುಗಳನ್ನು ಬಿಡುಗಡೆ ಮಾಡಿದೆ. ಇದು ಐ20ಯ ಬೇಸಿಕ್ ಮಾಡೆಲ್ ಕಾರಿನ ಬೆಲೆಗಿಂತಲೂ 40,000 ಕಡಿಮೆ ಬೆಲೆ ಎಂಬುದು ವಿಶೇಷ.

ಒಂದೆಡೆ ಹುಂಡೈಯ ಐ10 ಕಾರು ವ್ಯಾಪಕ ಬೇಡಿಕೆಯಲ್ಲಿ ಮಾರಾಟವಾಗುತ್ತಿದ್ದರೆ, ಇನ್ನೊಂದೆಡೆ ಐ20 ಕಾರು ತನ್ನ ಗುಣಮಟ್ಟ ಹಾಗೂ ಲುಕ್‌ಗಾಗಿ ವ್ಯಾಪಕ ಉತ್ತಮ ಪ್ರತಿಕ್ರಿಯೆ ಪಡೆದರೂ, ಮಾರಾಟ ವಿಭಾಗದಲ್ಲಿ ಅಂದುಕೊಂಡ ಶಾದನೆಯನ್ನು ಮಾಡಿಲ್ಲ. ಇದೇ ಸಂದರ್ಭ ಬಿಡುಗಡೆ ಕಂಡಿರುವ ಫೋರ್ಡ್ ಫಿಗೋ, ವೋಕ್ಸ್‌ವೋಗನ್ ಪೋಲೋ, ಜಿಎಂ ಬೀಟ್ ಕಾರುಗಳು ತಮ್ಮ ಲುಕ್, ಗುಣಮಟ್ಟ ಹಾಗೂ ಬೆಲೆಯಲ್ಲೂ ಸ್ಪರ್ಧಾತ್ಮಕವಾಗಿರುವುದು ಐ20ಯ ಮಾರಾಟ ಇಳಿಕೆಗೆ ಕಾರಣ ಎಂದು ಲೆಕ್ಕಾಚಾರ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇರುವ ಬೇಸ್ಕ್ ಮಾಡೆಲ್ ಐ20 ಜೊತೆಗೇ ಎರಡು ಹೊಸ ವರ್ಶನ್‌ ಐ20 ಕಾರುಗಳು ಬಿಡುಗಡೆ ಕಂಡಿದ್ದು, ಇದರ ಬೆಲೆ 4,50,000 ರೂಪಾಯಿಗಳಿಂದ ಆರಂಭವಾಗುತ್ತದೆ.

ಫೋರ್ಡ್‌ನ ಫಿಗೋ 3.49 ಲಕ್ಷ ರೂಪಾಯಿಗಳಾಗಿದ್ದರೆ, ಜಿಎಂನ ಬೀಟ್ 3.3 ಲಕ್ಷ ಬೆಲೆಯನ್ನು ಹೊಂದಿದೆ. ವೋಕ್ಸ್‌ವೋಗನ್ ಪೋಲೋ 4.4 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿದ್ದು, ಈ ಮೂರೂ ಕಾರುಗಳು ಸದ್ಯ ಪೈಪೋಟಿಯಲ್ಲಿವೆ.
ಸಂಬಂಧಿತ ಮಾಹಿತಿ ಹುಡುಕಿ