ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಾಲು ತುಟ್ಟಿ, ಆಹಾರದ ಹಣದುಬ್ಬರ ಶೇ.17.7ಕ್ಕೇರಿಕೆ (Food prices India | Food inflation india | Price rise India)
Bookmark and Share Feedback Print
 
ಮಾರ್ಚ್ 27ರಂದು ಅಂತ್ಯವಾದ ವಾರದಲ್ಲಿ ಆಹಾರ ಹಣದುಬ್ಬರ ಶೇ.17.70ಕ್ಕೇರಿದೆ. ರಿಸರ್ವ್ ಬ್ಯಾಂಕ್ ಇದೇ ಏ.20ರಂದು ವಾರ್ಷಿಕ ಹಣಕಾಸು ನೀತಿಗೆ ಇನ್ನಷ್ಟು ಕಡಿವಾಣ ಹಾಕುವ ನಿರೀಕ್ಷೆಯೂ ಈಗ ಹೆಚ್ಚಿದ್ದು, ಅದೂ ಕೂಡಾ ಹಣದುಬ್ಬರಕ್ಕೆ ಕಾರಣ ಎನ್ನಲಾಗಿದೆ.

ಇದಕ್ಕೂ ಮೊದಲಿನ ವಾರದಲ್ಲಿ ಶೇ.16.35ಕ್ಕೆ ಹಣದುಬ್ಬರ ಅಂತ್ಯವಾಗಿತ್ತು. ಆದರೆ ನಂತರ ಮತ್ತೆ ಇದು ಏರಿಕೆ ಕಂಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯ ಭಯದಲ್ಲೇ ಈ ಹಣದುಬ್ಬರ ಏರಿಕೆಯಾಗುವುದಕ್ಕೆ ಮತ್ತೊಂದು ಕಾರಣವಾಗಿದೆ.

ಫೆಬ್ರವರಿ ತಿಂಗಳ ಒಟ್ಟು ಹಣದುಬ್ಬರದ ಲೆಕ್ಕಾಚಾರ ಹಾಕಿದರೆ, ಆಹಾರ ಹಾಗೂ ಆಹಾರೇತರ ವಸ್ತುಗಳ ಹಣದುಬ್ಬರ ಒಟ್ಟು ಶೇ.9.89 ಆಗಿದೆ.

ವಾರದ ಲೆಕ್ಕಾಚಾರದ ಪ್ರಕಾರ, ಆಹಾರ ವಸ್ತುಗಳ ಬೆಲೆ ಶೇ.0.9ರಷ್ಟು ಏರಿಕೆ ಕಂಡಿದ್ದು, ಮೀನು, ಸಮುದ್ರ ಆಹಾರಗಳು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ