ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕ ಗ್ಯಾಸ್ ಯೋಜನೆ: ರಿಲಯನ್ಸ್‌ನಿಂದ ಮಹತ್ವದ ಒಪ್ಪಂದ (RIL | US gas project | Atlas Energy Inc)
Bookmark and Share Feedback Print
 
ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಅಟ್ಲಾಸ್ ಗ್ಯಾಸ್ ಎನರ್ಜಿ ಸಂಸ್ಥೆಯೊಂದಿಗೆ 1.7 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್ ಆ ಮೂಲಕ ಹೆಚ್ಚಿನ ಗ್ಯಾಸ್ ಪೂರೈಕೆಯ ಉದ್ದೇಶ ಹೊಂದಿದೆ.

ಮುಂದಿನ 10 ವರ್ಷಗಳ ಅವಧಿಯಲ್ಲಿ 3.5 ಡಾಲರ್ ವ್ಯಯಿಸುವ ಯೋಜನೆ ಇದಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೋಕ್ ಅಗರ್ವಾಲ್ ಹೇಳಿದ್ದಾರೆ.

ಈ ಒಪ್ಪಂದದ ಪ್ರಕಾರ, ರಿಲಯನ್ಸ್ ಶೇ.40ರ ಷೇರುಗಳನ್ನು ಪಡೆದಿದ್ದು, ಸುಮಾರು 3,00,000 ಎಕರೆ ಪ್ರದೇಶದಲ್ಲಿ ಮಹತ್ವದ ಗ್ಯಾಸ್ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಪ್ರದೇಶ ಪೆನಿಸಿಲ್ವೇನಿಯಾ, ಪಶ್ಚಿವ ವರ್ಜೀನಿಯಾ ಹಾಗೂ ನ್ಯೂಯಾರ್ಕ್ ಸುತ್ತಮುತ್ತ ಹರಡಿಕೊಂಡಿದ್ದು, ಅಮೆರಿಕಕ್ಕೆ ಮುಂದಿನ ದಶಕಕ್ಕೆ ಅಗತ್ಯವಾದ ನೈಸರ್ಗಿಕ ಅನಿಲ ಪೂರೈಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ