ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಹುನಿರೀಕ್ಷಿತ 3ಜಿ ಸ್ಪೆಕ್ಟ್ರಂ ಹರಾಜು ಆರಂಭ (3G auction | Reserve price | Vodafone | Essar | Idea)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಮೀಸಲು ದರಕ್ಕಿಂತ ಶೇ.12ರಷ್ಟು ಹೆಚ್ಚಳ ಮೊತ್ತದತ್ತ ಸಾಗಿದೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ತಿಳಿಸಿವೆ.

ಭಾರ್ತಿ ಏರ್‌ಟೆಲ್, ರಿಲಯನ್ಸ್ ಕಮ್ಯೂನಿಕೇಶನ್ಸ್, ವೋಡಾಫೋನ್ ಎಸ್ಸಾರ್, ಐಡಿಯಾ ಸೆಲ್ಯೂಲರ್, ಟಾಟಾ ಟೆಲಿ ಸರ್ವಿಸಸ್, ಏರ್‌ಸೆಲ್, ಎಟಿಸಾಲಟ್, ಎಸ್‌ ಟೆಲ್ ಮತ್ತು ವೀಡಿಯೋಕಾನ್ ಟೆಲಿಕಾಂ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಿದ್ದು ರವಿವಾರ ಮತ್ತು ರಾಷ್ಯ್ರೀಯ ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 7.30 ಗಂಟೆಯವರಿಗೆ ಆನ್‌ಲೈನ್ ಹರಾಜು ನಡೆಯಲಿದೆ.

ದೆಹಲಿ ವಲಯಕ್ಕೆ 320 ಕೋಟಿ ಮೀಸಲು ದರವನ್ನು ನಿಗದಿಪಡಿಸಿದ್ದು, 373.29 ಕೋಟಿ ರೂಪಾಯಿಗಳವರೆಗೆ ಹರಾಜು ಮೊತ್ತ ತಲುಪಿದೆ. ಮುಂಬೈ ಮತ್ತು ಮಹಾರಾಷ್ಟ್ರ ವಲಯಗಳಿಗೆ 362.66 ಕೋಟಿ ರೂಪಾಯಿಗಳಿಗೆ ತಲುಪಿದೆ. ಉಳಿದ ವಲಯಗಳು ಋಣಾತ್ಮಕ ಬೇಡಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ 10-12 ದಿನಗಳವರೆಗೆ ಹರಾಜು ಕಾರ್ಯ ನಡೆಯಲಿದ್ದು, ನಂತರ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಹರಾಜಿನಲ್ಲಿ ಗೆದ್ದ ಬಿಡ್‌ದಾರರು 10 ದಿನಗಳೊಳಗಾಗಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ