ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೆಟ್ರೋ ನಗರಗಳಲ್ಲಿ ಸಕ್ಕರೆ ದರ ಇಳಿಕೆ (Sugar prices | Government | Consumer Affairs)
Bookmark and Share Feedback Print
 
ಜನೆವರಿ ಮಧ್ಯ ಭಾಗದಲ್ಲಿ ಪ್ರತಿ ಕೆಜಿಗೆ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದ ಸಕ್ಕರೆ ದರ, ಏಪ್ರಿಲ್ 7ಕ್ಕೆ ವಾರಂತ್ಯಗೊಂಡಂತೆ ದೇಶದ ಮೆಟ್ರೋನಗರಗಳಲ್ಲಿ ದರ ಇಳಿಕೆಯಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ದೆಹಲಿ, ಮುಂಬೈ, ಸಿಮ್ಲಾ,ಜೈಪುರ್ ಕೋಲ್ಕತಾ ಮತ್ತು ತಿರುವನಂತಪುರಂನಲ್ಲಿ ಸಕ್ಕರೆ ದರ ಇಳಿಕೆಯಾಗಿದ್ದು, ಇತರ ನಗರಗಳಲ್ಲಿ ಸಕ್ಕರೆ ದರ ಸ್ಥಿರವಾಗಿದೆ ಎಂದು ಅಧಿಕಾರಿಗಳು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಗ್ರಾಹಕ ವ್ಯವಹಾರಗಳ ಇಲಾಖೆ ದೇಶದ 17 ಪ್ರಮುಖ ಮಾರುಕಟ್ಟೆಗಳ, ಆಲೂಗಡ್ಡೆ, ಉಪ್ಪು, ಖಾದ್ಯ ತೈಲ ಸಕ್ಕರೆ, ಗೋಧಿ ಸೇರಿದಂತೆ14 ಅಗತ್ಯ ದಿನಸಿ ವಸ್ತುಗಳ ಚಿಲ್ಲರೆ ಹಾಗೂ ಸಗಟು ವಹಿವಾಟು ದರವನ್ನು ಬಹಿರಂಗಪಡಿಸಿದೆ.

ರಾಜಧಾನಿ ನವದೆಹಲಿಯಲ್ಲಿ ಭತ್ತ, ಗೋಧಿ, ಸಕ್ಕರೆ, ವನಸ್ಪತಿ.ಈರುಳ್ಳಿ ಹಾಗೂ ಉಪ್ಪು ದರಗಳು ಸ್ಥಿರವಾಗಿದ್ದು, ಕೊಬ್ಬರಿ ಎಣ್ಣೆ ದರದಲ್ಲಿ 3 ರೂಪಾಯಿಗಳಷ್ಟು ಇಳಿಕೆಯಾಗಿದೆ. ದ್ವಿದಳ ಧಾನ್ಯಗಳ ದರಗಳಲ್ಲಿ ಇಳಿಕೆಯಾಗಿದೆ ಎಂದು ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ