ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೆಬಿಯಿಂದ 14 ವಿಮಾ ಕಂಪೆನಿಗಳಿಗೆ ನಿಷೇಧ (SEBI | Bans | ULIP | SBI Life | ICICI Prudential)
Bookmark and Share Feedback Print
 
ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ, ಎಸ್‌ಬಿಐ ಲೈಫ್, ಐಸಿಐಸಿಐ ಪ್ರೂಡೆನ್ಶಿಯಲ್ ಹಾಗೂ ಟಾಟಾ ಎಐಜಿ ಸೇರಿದಂತೆ 14 ವಿಮಾ ಕಂಪೆನಿಗಳಿಗೆ ಯುಲಿಪ್ ಮೂಲಕ ಹಣ ಸಂಗ್ರಹಿಸದಂತೆ ನಿಷೇಧ ಹೇರಿದೆ.

ಮ್ಯೂಚುವಲ್ ಫಂಡ್‌ನಂತೆ ಯುಲಿಪ್ ಮೂಲಕ ಹಣ ಸಂಗ್ರಹಿಸಲು ನಿಷೇಧಿತ ವಿಮಾ ಕಂಪೆನಿಗಳು ನೋಂದಣಿಯಾಗಿಲ್ಲವಾದ್ದರಿಂದ, ಯುಲಿಪ್ ಮೂಲಕ ಹಣ ಸಂಗ್ರಹಿಸದಂತೆ ವಿಮಾ ಕಂಪೆನಿಗಳಿಗೆ ನಿಷೇಧ ಹೇರಲಾಗಿದೆ ಎಂದು ಸೆಬಿ ಹೊರಡಿಸಿದ ಆದೇಶದಲ್ಲಿ ಬಹಿರಂಗಪಡಿಸಿದೆ.

ನಿಷೇಧಿತ ಇತರ ವಿಮಾ ಕಂಪೆನಿಗಳಲ್ಲಿ ರಿಲಯನ್ಸ್ ಲೈಫ್, ಆವಿವಾ ಲೈಫ್, ಬಜಾಜ್ ಅಲೈಂಜ್, ಭಾರ್ತಿ ಎಎಕ್ಸ್‌‍ಎ, ಬಿರ್ಲಾ ಸನ್‌ಲೈಫ್, ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್, ಐಎನ್‌ಜಿ ವೈಶ್ಯ ಲೈಫ್, ಕೊಟಾಕ್ ಮಹೀಂದ್ರಾದ ಒಲ್ಡ್ ಮ್ಯೂಚುವಲ್ ಲೈಫ್, ಮ್ಯಾಕ್ಸ್ ನ್ಯೂಯಾರ್ಕ್ ಲೈಫ್, ಮೆಟ್‌ಲೈಫ್ ಇಂಡಿಯಾ ಕಂಪೆನಿಗಳು ಸೇರ್ಪಡೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ