ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾರು ಮಾರಾಟ:ವಿಶ್ವದಲ್ಲಿ ಭಾರತಕ್ಕೆ 2ನೇ ಸ್ಥಾನ (China|car | India | Germany)
Bookmark and Share Feedback Print
 
ಜಾಗತಿಕ ವಾಹನೋದ್ಯಮ ಕ್ಷೇತ್ರ ಕುಸಿತದತ್ತ ಸಾಗುತ್ತಿರುವ ಮಧ್ಯೆಯು ಭಾರತದ ವಾಹನೋದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು,ವಿಶ್ವದಲ್ಲಿ ಚೀನಾದ ನಂತರದ ಸ್ಥಾನಪಡಿದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರದ ಉತ್ತೇಜನ ಪ್ಯಾಕೇಜ್‌ಗಳಿಂದಾಗಿ.ದೇಶದ ವಾಹನೋದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು,ಆರ್ಥಿಕ ಸ್ಥಿರತೆ ಹಾಗೂ ನೂತನ ಮಾಡೆಲ್‌ಗಳ ಕಾರು ಬಿಡುಗಡೆ ಮತ್ತು ಕಡಿಮೆ ಬಡ್ಡಿ ದರದಿಂದಾಗಿ ವಾಹನೋದ್ಯಮ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಹನೋದ್ಯಮ ಕ್ಷೇತ್ರದ ಸಂಘಟನೆಯಾದ ಸಿಯಾಮ್,ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು,ವಾಣಿಜ್ಯಿಕ್ ವಾಹನಗಳು, ಲಘು ವಾಹನಗಳು ಹಾಗೂ ಬಹುಪಯೋಗಿ ವಾಹನಗಳ ಕ್ಷೇತ್ರದಲ್ಲಿ ಭಾರತ ಶೇ.27.5ರಷ್ಟು ಏರಿಕೆ ಕಂಡಿದ್ದು, ಜರ್ಮನಿ(ಶೇ.23ರಷ್ಟು), ಬ್ರೆಜಿಲ್ (ಶೇ.11ರಷ್ಟು), ಫ್ರಾನ್ಸ್(ಶೇ.11ರಷ್ಟು), ಇಟಲಿ (ಶೇ.-0.2),ಬ್ರಿಟನ್ (ಶೇ.-6.0)ಜಪಾನ್ (ಶೇ.-9.0)ಅಮೆರಿಕ (ಶೇ.-21)ಮತ್ತು ರಷ್ಯಾ (ಶೇ-50)ಕುಸಿತ ಕಂಡಿವೆ.

ಕೇಂದ್ರ ಸರಕಾರ ಶೇ.50ರಷ್ಟು ವಾಹನ ತೆರಿಗೆಯಲ್ಲಿ ಕಡಿತಗೊಳಿಸಿದ ನಂತರ ಲಘುವಾಹನಗಳ ಮಾರಾಟದಲ್ಲಿ ಶೇ.42ರಷ್ಟು ಏರಿಕೆ ಕಂಡಿವೆಎಂದು ಸಿಯಾಮ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ