ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್:ರೂಪಾಯಿ ಮೌಲ್ಯ ಬಲವರ್ಧನೆ (Rupee|forex|dollar)
Bookmark and Share Feedback Print
 
ಏಷ್ಯಾ ಕರೆನ್ಸಿಗಳ ಸ್ಥಿರವಹಿವಾಟಿನಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 5 ಪೈಸೆ ಏರಿಕೆಯಾಗಿದ್ದು, 19 ತಿಂಗಳ ಗರಿಷ್ಠ ಏರಿಕೆ ಕಂಡು 44.23ರೂಪಾಯಿಗಳಿಗೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 17 ಪೈಸೆ ಏರಿಕೆ ಕಂಡು 44.28/29 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ 5 ಪೈಸೆ ಏರಿಕೆ ಕಂಡು 44.23 ರೂಪಾಯಿಗಳಿಗೆ ತಲುಪಿದೆ.

ಏಷ್ಯಾ ಕರೆನ್ಸಿಗಳ ಸ್ಥಿರವಹಿವಾಟು ಹಾಗೂ ಬ್ಯಾಂಕ್‌ಗಳು ಮತ್ತು ಅಮುದು ವಹಿವಾಟುದಾರರಿಂದ ಡಾಲರ್‌ಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ, ರೂಪಾಯಿ ಮೌಲ್ಯ ಚೇತರಿಕೆಗೆ ಕಾರಣವಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ಅದನ್ನು ಹೊರತುಪಡಿಸಿ, ದೇಶಿಯ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗಿರುವುದು ಕೂಡಾ ರೂಪಾಯಿ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಮುಂಬೈ ಶೇರುಪೇಟೆಯ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 62.11 ಪಾಯಿಂಟ್‌ಗಳ ಏರಿಕೆ ಕಂಡು 17,995.25 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಫಾರೆಕ್ಸ್, ಡಾಲರ್