ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತಕ್ಕೆ ಶೇ.9-10ರಷ್ಟು ಜಿಡಿಪಿ ದರದ ಗುರಿ:ಪ್ರಧಾನಿ (Manmohan Singh | Barack Obama | Economic growth)
Bookmark and Share Feedback Print
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ಷಣೆ-ಮುಕ್ತ ವಾತಾವರಣ ನಿರ್ಮಾಣವಾದಲ್ಲಿ, ಭಾರತದ ಆರ್ಥಿಕತೆ ಶೇ.9-10ರಷ್ಟು ಜಿಡಿಪಿ ದರದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಪರಿಷ್ಕರಿಸುವುದು ಅಗತ್ಯವಾಗಿದ್ದು, ಜಿ-20 ರಾಷ್ಟ್ರಗಳು ಮಹತ್ತರ ಪಾತ್ರ ನಿರ್ವಹಿಸಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ನಡೆದ ಸಭೆಯಲ್ಲಿ ಪ್ರಧಾನಿ ಸಿಂಗ್ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು, ಇಂಧನ ಭಧ್ರತೆ, ಅಹಾರ ಭಧ್ರತೆ ಸೇರಿದಂತೆ ಜಿ-20 ರಾಷ್ಟ್ರಗಳ ಕಾರ್ಯಕ್ರಮಗಳ ಕುರಿತಂತೆ ಪ್ರಧಾನಿ ಡಾ.ಸಿಂಗ್ ಮತ್ತು ಬರಾಕ್ ಒಬಾಮಾ ಚರ್ಚಿಸಿದರು ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.

ಉಭಯ ದೇಶಗಳ ಮಧ್ಯೆ ಬಾಂಧವ್ಯ ವೃದ್ಧಿಯಲ್ಲಿ ಹೊಸತೊಂದು ಅಧ್ಯಾಯ ಆರಂಭಿಸಬೇಕು ಎಂದು ಪ್ರಧಾನಿ,ಬರಾಕ್ ಒಬಾಮಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ