ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಕೈಗಾರಿಕೋದ್ಯಮ ಇಳುವರಿಯಲ್ಲಿ ಕುಸಿತ (Industarial production | Economy)
Bookmark and Share Feedback Print
 
ದೇಶದ ಕೈಗಾರಿಕೋದ್ಯಮ ಇಳುವರಿ ಫೆಬ್ರವರಿ ತಿಂಗಳ ಅವಧಿಯಲ್ಲಿ ನಿರೀಕ್ಷೆಗಿಂತ ಇಳಿಕೆ ಕಂಡಿದೆ.ಆರ್‌ಬಿಐನಿಂದ ರೆಪೋ ದರ ಏರಿಕೆ ಹಾಗೂ ಉತ್ತೇಜನ ಪ್ಯಾಕೇಜ್‌ಗಳನ್ನು ಸರಕಾರ ಹಿಂಪಡೆದಿರುವುದರಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಕಳೆದ ವರ್ಷದ ಫೆಬ್ರವರಿ ತಿಂಗಳ ಅವಧಿಯಲ್ಲಿ ಕೈಗಾರಿಕೋದ್ಯಮ ಇಳುವರಿ ಶೇ.15.1ಕ್ಕೆ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.

ವಾರ್ಷಿಕವಾಗಿ ಬಂಡವಾಳ ವಸ್ತುಗಳ ಕ್ಷೇತ್ರದಲ್ಲಿ ಶೇ.44.4ರಷ್ಟು ಏರಿಕೆ ಕಂಡಿದ್ದು, ಏತನ್ಮಧ್ಯೆ, ಗೃಹೋಪಕರಣ ವಸ್ತುಗಳ ಕ್ಷೇತ್ರದಲ್ಲಿ ಶೇ.29.9ರಷ್ಟು ಚೇತರಿಕೆ ಕಂಡಿದೆ.

ಫೆಬ್ರವರಿ ತಿಂಗಳ ಅವಧಿಯಲ್ಲಿ ಉತ್ಪಾದನಾ ಕ್ಷೇತ್ರ, ಶೇ.16ರಷ್ಟು ಏರಿಕೆಯಾಗಿತ್ತು.ಗಣಿಗಾರಿಕೆಯಲ್ಲಿ ಶೇ.12.2 ಮತ್ತು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಶೇ.6.7ರಷ್ಟು ಹೆಚ್ಚಳವಾಗಿತ್ತು.

ಆಹಾರ ಧಾನ್ಯಗಳ ದರ ಏರಿಕೆಯಿಂದಾಗಿ ಏರಿಕೆ ಕಂಡಿದ್ದ ವಾರ್ಷಿಕ ಹಣದುಬ್ಬರ ದರ, ಇದೀಗ ಅಹಾರೇತರ ಕ್ಷೇತ್ರಗಳತ್ತ ವಿಸ್ತರಿಸುತ್ತಿದೆ.ಕಳೆದ ಜನೆವರಿ ತಿಂಗಳ ಅವಧಿಯಲ್ಲಿ ಶೇ.6.5ರಷ್ಟಿದ್ದ ಹಣದುಬ್ಬರ ದರ, ಫೆಬ್ರವರಿ ತಿಂಗಳ ಅವಧಿಯಲ್ಲಿ ಸೇ.7.4ಕ್ಕೆ ಏರಿಕೆ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೈಗಾರಿಕೆ ಇಳುವರಿ, ಆರ್ಥಿಕತೆ