ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಫೋಸಿಸ್‌ಗೆ 1,617 ಕೋಟಿ ರೂಪಾಯಿ ನಿವ್ವಳ ಲಾಭ (Infosys | Net profit, | Bombay Stock Exchange.)
Bookmark and Share Feedback Print
 
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಇನ್ಫೋಸಿಸ್ ಟೆಕ್ನಾಲಾಜೀಸ್,2010 ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ಕ್ರೂಢೀಕೃತ ನಿವ್ವಳ ಲಾಭದಲ್ಲಿ ಶೇ.0.25ರಷ್ಟು ಏರಿಕೆಯಾಗಿ 1,617 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ಅವಧಿಯಲ್ಲಿ ಕಂಪೆನಿಯ ನಿವ್ವಳ ಲಾಭ 1,613 ಕೋಟಿ ರೂಪಾಯಿಗಳಾಗಿತ್ತು ಎಂದು ಇನ್ಫೋಸಿಸ್ ಕಂಪೆನಿ, ಮುಂಬೈ ಶೇರುಪೇಟೆಗೆ ಮಾಹಿತಿಯನ್ನು ಸಲ್ಲಿಸಿತ್ತು.

ಸಾಫ್ಟ್‌ವೇರ್ ಸೇವೆ, ಉತ್ಪನ್ನ ಹಾಗೂ ವಹಿವಾಟು ಆದಾಯ 5,944 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 5635 ಕೋಟಿ ರೂಪಾಯಿಗಳಾಗಿತ್ತು. ಕಂಪೆನಿಯ ನಗದು ವಹಿವಾಟು ಮಾರ್ಚ್ 31ರ ಅಂತ್ಯಕ್ಕೆ 3.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶಿಯ ಕರೆನ್ಸಿ ರೂಪಾಯಿ ತೊಳಲಾಟದಿಂದಾಗಿ, ನಿವ್ವಳ ಲಾಭದಲ್ಲಿ ಕುಸಿತವಾಗಿದೆ ಎಂದು ಇನ್ಫೋಸಿಸ್ ಆರ್ಥಿಕ ವಿಭಾಗದ ಮುಖ್ಯಸ್ಥ ವಿ.ಪಬಾಲಕೃಷ್ಣನ್ ತಿಳಿಸಿದ್ದಾರೆ.

ಇನ್ಫೋಸಿಸ್ ಅಡಳಿತ ಮಂಡಳಿ, ಶೇರುದಾರರಿಗೆ ಡೆವಿಡೆಂಡ್ ಘೋಷಿಸಿದ್ದು, ತಲಾ 5 ರೂಪಾಯಿ ಶೇರಿಗೆ 15 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಕಂಪೆನಿಯ ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಮುಂಬೈ ಶೇರುಪೇಟೆಯಲ್ಲಿ ಇನ್ಫೋಸಿಸ್ ತಲಾ ಶೇರುದರದಲ್ಲಿ ಶೇ.0.55ರಷ್ಟು ಇಳಿಕೆಯಾಗಿದ್ದು, 2,668.45 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ