ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ತರಂಗಾಂತರ:ಅಗ್ರಸ್ಥಾನದಲ್ಲಿ ದೆಹಲಿ, ಗುಜರಾತ್‌ (3G bid | Spectrum | Government | BWA | Auction)
Bookmark and Share Feedback Print
 
ದೇಶದಾದ್ಯಂತ 3ಜಿ ತರಂಗಾಂತರಗಳ ಹರಾಜು ಬಿಡ್‌ ಆರಂಭವಾಗಿದ್ದು, 16ನೇ ಸುತ್ತಿನ ನಂತರ 4,324 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಕೇಂದ್ರ ಸರಕಾರ 17,636 ಕೋಟಿ ರೂಪಾಯಿ ಆದಾಯ ಪಡೆಯುವುದು ಖಚಿತವಾಗಿದೆ.

ಸೋಮವಾರಂದ ಬಿಡ್ ಅಂತ್ಯಗೊಂಡಂತೆ, 3ಜಿ ತರಂಗಾಂತರಗಳ ಮೀಸಲು ಹರಾಜು ಮೊತ್ತವಾದ 3,500ಕೋಟಿ ರೂಪಾಯಿಗಳಿಗಿಂತ, ಬಿಡ್‌ನಲ್ಲಿ ಶೇ.24ರಷ್ಟು ಹೆಚ್ಚಳವಾಗಿ 4,085 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕೇಂದ್ರ ಸರಕಾರ 3ಜಿ ಹಾಗೂ ಬಿಡಬ್ಲೂಎ ಸೇವೆ ಮಾರಾಟದಿಂದಾಗಿ, ಒಟ್ಟು 35,000 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದ ಎಲ್ಲಾ ಮೆಟ್ರೋ ನಗರಗಳಿಗಿಂತ ದೆಹಲಿಯಲ್ಲಿ 3ಜಿ ಹರಾಜಿನ ಬಿಡ್ ಗರಿಷ್ಠ 416.43 ಕೋಟಿ ರೂಪಾಯಿಗಳಿಗೆ ತಲುಪಿದೆ.ಗುಜರಾತ್ 416.42 ಕೋಟಿ ರೂಪಾಯಿಗಳಾಗಿವೆ ಎಂದು ಟೆಲಿಕಾಂ ಇಲಾಖೆ ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 3ಜಿ ತರಂಗಾಂತರ ಬಿಡ್ 404.54ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.ಏತನ್ಮಧ್ಯೆ,ಕರ್ನಾಟಕ ಮತ್ತು ಮುಂಬೈ ಕ್ರಮವಾಗಿ 396.58 ಹಾಗೂ 392.66 ಕೋಟಿ ರೂಪಾಯಿಗಳಿಗೆ ತಲುಪಿದೆ.

ರಾಜಸ್ಥಾನ 159.47 ಕೋಟಿ ರೂಪಾಯಿ,ಉತ್ತರಪ್ರದೇಶ (157.66 ಕೋಟಿ ರೂಪಾಯಿ), ಕೋಲ್ಕತಾ ಮತ್ತು ಕೇರಳ ತಲಾ (150.16 ಕೋಟಿ ರೂಪಾಯಿ), ಮಧ್ಯಪ್ರದೇಶ (149.02 ಕೋಟಿ ರೂಪಾಯಿ), ಹರಿಯಾಣಾ (140.09 ಕೋಟಿ ರೂಪಾಯಿ)ಪಂಜಾಬ್ (123.63 ಕೋಟಿ ರೂಪಾಯಿ) ಬಿಡ್‌ನಲ್ಲಿ ಏರಿಕೆಯಾಗಿದೆ.

ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಬಿಹಾರ್, ಒರಿಸ್ಸಾ, ಆಸ್ಸಾಂ, ಜಮ್ಮು ಕಾಶ್ಮಿರ ಮತ್ತು ಹರಿಯಾಣಾ ರಾಜ್ಯ ಸೇರಿದಂತೆ ಒಂಬತ್ತು ವಲಯಗಳಲ್ಲಿ 3ಜಿ ಬೇಡಿಕೆಗೆ ಹಿನ್ನೆಡೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ