ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐನಿಂದ ಮತ್ತಷ್ಟು ರೆಪೋ ದರಗಳಲ್ಲಿ ಹೆಚ್ಚಳ (RBI | Finance Ministry | Financial services | Interest rate)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್, ಏಪ್ರಿಲ್ ತಿಂಗಳ ಆರ್ಥಿಕ ಪರಿಷ್ಕರಣ ಸಂದರ್ಭದಲ್ಲಿ ಮತ್ತಷ್ಟು ಬಿಗಿ ನಿಲುವುಗಳನ್ನು ಜಾರಿಗೊಳಿಸಲಿದೆ ಎಂದು ಕೇಂದ್ರದ ವಿತ್ತ ಸೇವೆಗಳ ಕಾರ್ಯದರ್ಶಿ ಆರ್. ಗೋಪಾಲನ್ ಹೇಳಿದ್ದಾರೆ.

ದೇಶದಲ್ಲಿ ನಿರಂತರ ವಾರ್ಷಿಕ ಹಣದುಬ್ಬರ ಏರಿಕೆ ಮುಂದುವರಿದಿರುವುದರಿಂದ, ಆರ್‌ಬಿಐ ಮತ್ತಷ್ಟು ಬಡ್ಡಿ ದರಗಳನ್ನು ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ 20 ರಂದು ನಡೆಸಲಾಗುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹೂಡಿಕೆದಾರರು ಈಗಾಗಲೇ ಉಹಿಸಿದ್ದಾರೆ..

ಆರ್ಥಿಕತೆ ಚೇತರಿಕೆಯಂದಾಗಿ ಹಣದುಬ್ಬರ ಕೂಡಾ ನಿರಂತರ ಏರಿಕೆ ಕಾಣುತ್ತಿದ್ದು,ಮಾರ್ಚ್ ತಿಂಗಳ ಅವಧಿಯಲ್ಲಿ ಶೇ.10ರಷ್ಟು ಹಣದುಬ್ಬರ ಕಾಣಲಿದೆ ಎನ್ನುವ ನಿರೀಕ್ಷೆಗಳ ವ್ಯಕ್ತವಾಗಿವೆ ಎಂದು ಗೋಪಾಲನ್ ತಿಳಿಸಿದ್ದಾರೆ.

ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ ಅಭಿವೃದ್ಧಿ ಹಾಗೂ ಹಣದುಬ್ಬರದ ಮಧ್ಯೆ ಸಮತೋಲನಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ವಿತ್ತ ಕಾರ್ಯದರ್ಶಿ ಗೋಪಾಲನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ