ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಭಾವಿಗಳ ಪಟ್ಟಿಯನ್ನು ಗ್ಯಾರೇಜ್‌ಗೆ ಎಸೆಯಬೇಕು:ನೂಯಿ (:Indra Nooyi | Powerful list | Pepsi)
Bookmark and Share Feedback Print
 
ಜಾಗತಿಕ ಮಟ್ಟದ ಫೋರ್ಬ್ಸ್ ಹಾಗೂ ಫಾರ್ಚ್ಯೂನ್ ಮ್ಯಾಗ್‌ಜಿನ್‌ಗಳು ಪ್ರಕಟಿಸುವ ಪ್ರಭಾವಶಾಲಿ ಪಟ್ಟಿಗಳನ್ನು ಗ್ಯಾರೇಜ್‌ಗೆ ಎಸೆಯಬೇಕು.ಪ್ರಭಾವಿಗಳ ಪಟ್ಟಿಯಿಂದ ನಮಗೆ ಲಾಭವಿಲ್ಲ. ಆದರೆ ಹೆಚ್ಚಿನ ಪ್ರತಿಗಳು ಮಾರಾಟವಾಗಲು ಸಹಾಯಕವಾಗುತ್ತದೆ ಎಂದು ಭಾರತೀಯ ಮೂಲದ ಪೆಪ್ಸಿಕೊ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಕಿಡಿಕಾರಿದ್ದಾರೆ.

ಜಾಗತಿಕ ಮಟ್ಟದ ಮ್ಯಾಗ್‌ಜಿನ್‌ಗಳ ಪ್ರಭಾವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಪ್ರಕಟವಾಗುವುದರಿಂದ ನಿಮಗೆ ಹೇಗನ್ನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂದ್ರಾ ನೂಯಿ, ಪ್ರಭಾವಿಗಳ ಪಟ್ಟಿಯಿಂದ ಮ್ಯಾಗ್‌ಜಿನ್‌ಗಳ ಮಾರಾಟದಲ್ಲಿ ಹೆಚ್ಚಳವಾಗಬಹುದು, ಆದರೆ ವೈಯಕ್ತಿಕವಾಗಿ ನನಗೆ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸಿಲ್ಲವೆಂದು ತಿಳಿಸಿದ್ದಾರೆ.

ಎಕಾನಾಮಿಕ್ ಕ್ಲಬ್ ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದ ನೂಯಿ, 2001ರಲ್ಲಿ ನಾನು ಮನೆಗೆ ತೆರಳಿ ಪೆಪ್ಸಿಕೊ ಕಂಪೆನಿಯ ಅಧ್ಯಕ್ಷಳಾಗಿ ನೇಮಕಗೊಂಡಿದ್ದೇನೆ ಎಂದು ಹೇಳಿದಾಗ ತಾಯಿ ಸಿಡಿಮಿಡಿಗೊಂಡು, ಮನೆಗೆ ಬರುವಾಗ ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ ಬಾ, ನಿನ್ನ ಹುದ್ದೆಯನ್ನು ಮನೆಯ ಹಿಂಬದಿಯಲ್ಲಿರುವ ಗ್ಯಾರೇಜ್‌ನಲ್ಲಿ ಬಿಟ್ಟು ಬಾ ಎಂದು ಅಕ್ರೋಶದಿಂದ ಹೇಳಿರುವುದನ್ನು ನೆನಪಿಸಿಕೊಂಡರು.

ಬಿಜಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ 2008 ಮತ್ತು 2009ರ ಮಹಿಳಾ ಪ್ರಭಾವಿಗಳ ಪಟ್ಟಿಯಲ್ಲಿ ಇಂದ್ರಾ ನೂಯಿಗೆ ಮೂರನೇ ಸ್ಥಾನಕ್ಕೆ ಕಲ್ಪಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ