ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ 30,000 ಉದ್ಯೋಗಿಗಳ ನೇಮಕ:ಇನ್ಫೋಸಿಸ್ (Software service | Infosys Technologies | Global technology)
Bookmark and Share Feedback Print
 
ಭಾರತದ ಎರಡನೇ ಬೃಹತ್ ಸಾಫ್ಟ್‌ವೇರ್ ಕಂಪೆನಿಯಾದ ಇನ್ಫೋಸಿಸ್ ಟೆಕ್ನಾಲಾಜೀಸ್, ಪ್ರಸಕ್ತ ಆರ್ಥಿಕ ವರ್ಷಾಂತ್ಯದವರೆಗೆ 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಎಸ್‌.ಡಿ.ಶಿಬುಲಾಲ್ ಮಾತನಾಡಿ,2010-11ರ ಆರ್ಥಿಕ ಸಾಲಿನಲ್ಲಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಕಳೆದ ವರ್ಷದ ಅವಧಿಯಲ್ಲಿ 19 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್ ಕಂಪೆನಿಯವಾರ್ಷಿಕ ನಿವ್ವಳ ಆದಾಯ ನಿರೀಕ್ಷೆಗೆ ಮೀರಿ ಶೇ 16-18 ರವರೆಗೆ ಏರಿಕೆ ಕಂಡಿದೆ.ಜಾಗತಿಕ ತಂತ್ರಜ್ಞಾನ ಕಂಪೆನಿಗಳು ಹೊರಗುತ್ತಿಗೆಗಾಗಿ ವೆಚ್ಚವನ್ನು ಮಾಡುತ್ತಿವೆ ಎಂದು ಹೇಳಿದ್ದಾರೆ..

ವಿದೇಶಿ ವಿನಿಮಯ ಮಾರುಪಕಟ್ಟೆಯಲ್ಲಿ ರೂಪಾಯಿ ಮೌಲ್ಯದ ಸ್ಥಿರತೆಯಿಂದಾಗಿ ವಿದೇಶಿ ಬಂಡವಾಳದ ಹೂಡಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಮುಂದಿನ ವರ್ಷ ಕಂಪೆನಿಯ ಆದಾಯದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ