ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶಿ ಆದಾಯಕ್ಕೆ ತೆರಿಗೆ ರಿಯಾಯತಿ:ಅಸೋಚಾಮ್ ಒತ್ತಾಯ (Assocham | Foreign earnings | Income tax.| Exempt | Entrepreneurs)
Bookmark and Share Feedback Print
 
ಭಾರತೀಯ ಮೂಲದ ಸಾಗರೋತ್ತರ ಕಂಪೆನಿಗಳಲ್ಲಿ ಶೇ.10ರಷ್ಟು ಶೇರುಗಳನ್ನು ಹೊಂದಿರುವ ಲಾಭಾಂಶಕ್ಕೆ ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಸಲಹೆ ನೀಡಿದೆ.

ವಿದೇಶಗಳಲ್ಲಿನ ಆದಾಯಕ್ಕೆ ತೆರಿಗೆ ರಿಯಾಯತಿ ನೀಡುವುದರಿಂದ, ಭಾರತೀಯ ಉದ್ಯಮಿಗಳಿಗೆ ಸಾಗರೋತ್ತರ ಕಂಪೆನಿಗಳ ಆದಾಯವನ್ನು ಮರಳಿ ದೇಶಕ್ಕೆ ತಂದು ದೇಶಿಯವಾಗಿ ಹೂಡಿಕೆ ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಚೇಂಬರ್ ತಿಳಿಸಿದೆ.

ವಿದೇಶಿ ಕಂಪೆನಿಗಳಲ್ಲಿರುವ ಶೇ.10ರಷ್ಟು ಶೇರುಗಳನ್ನು ಹೊಂದಿರುವ ಭಾರತೀಯ ಉದ್ಯಮಿಗಳು,ಶೇರುಗಳ ಮಾರಾಟದ ಬಂಡವಾಳವನ್ನು ದೇಶಕ್ಕೆ ಮರಳಿ ತಂದಲ್ಲಿ ಅಂತಹ ಬಂಡವಾಳಕ್ಕೆ ತೆರಿಗೆ ರಿಯಾಯತಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಭಾರತದ ಕೈಗಾರಿಕೋದ್ಯಮ ಜಾಗತಿಕವಾಗಿ ಸ್ಪರ್ಧೆಯನ್ನು ಎದುರಿಸುತ್ತಿರುವುದರಿಂದ ಜಂಟಿ ಸಹಭಾಗಿತ್ವವನ್ನು ಆರಂಭಿಸುವುದು ಅಗತ್ಯವಾಗಿದೆ ಎಂದು ವಾಣಿಜ್ಯೋದ್ಯಮ ಸಂಘಟನೆಯಾದ ಅಸೋಚಾಮ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ