ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಫೋಸಿಸ್‌ಗೆ ಮೈಕ್ರೋಸಾಫ್ಟ್ ಬೃಹತ್ ಹೊರಗುತ್ತಿಗೆ (Microsoft | Infosys)
Bookmark and Share Feedback Print
 
ಮೆಲ್ಬೋರ್ನ್: ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯ ಮೂರು ವರ್ಷಗಳ ಐಟಿ ಹೊರಗುತ್ತಿಗೆಯನ್ನು ಪಡೆದುಕೊಳ್ಳುವಲ್ಲಿ ಭಾರತದ ಇನ್ಫೋಸಿಸ್ ಟೆಕ್ನಾಲಜೀಸ್ ಯಶಸ್ವಿಯಾಗಿದೆ.

ಮೈಕ್ರೋಸಾಫ್ಟ್ ಕಂಪನಿ 104 ದೇಶಗಳಲ್ಲಿ ಹೊಂದಿರುವ ಜಾಗತಿಕ ಮಟ್ಟದ ವ್ಯವಹಾರಗಳ ಗುತ್ತಿಗೆಯನ್ನು ಭಾರತೀಯ ಸಂಸ್ಥೆ ಪಡೆದುಕೊಂಡಿದ್ದು, ಇದರಲ್ಲಿ ಐಟಿ ಆಂತರಿಕ ಸೇವೆ ಹೆಲ್ಪ್‌ಡೆಸ್ಕ್, ಡೆಸ್ಕ್-ಸೈಡ್ ಸೇವೆ, ಐಟಿ ಮೂಲಭೂತ ವ್ಯವಸ್ಥೆಗಳು ಮತ್ತು ಸಾಫ್ಟ್‌ವೇರ್ ಬೆಂಬಲಿತ ಸೇವೆಗಳು ಒಳಗೊಂಡಿವೆ.

ಈ ಒಪ್ಪಂದದ ಒಟ್ಟು ಮೌಲ್ಯ ಎಷ್ಟು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ವಿಶ್ಲೇಷಕರ ಪ್ರಕಾರ 100 ಮಿಲಿಯನ್ ಡಾಲರುಗಳಿಗಿಂತ ಹೆಚ್ಚಿರಬಹುದು ಎಂದು ಹೇಳಲಾಗಿದೆ.

ಸುಮಾರು 450 ನೆಲೆಗಳಲ್ಲಿರುವ ಮೈಕ್ರೋಸಾಫ್ಟ್‌ನ ಸಾಫ್ಟ್‌ವೇರ್, ತಾಂತ್ರಿಕ ಸಾಧನಗಳು ಮತ್ತು ಡಾಟಾಬೇಸ್‌ಗಳ ಒಳ ಸೇವೆಗಳನ್ನು ಒದಗಿಸುವುದಾಗಿ ಇನ್ಫೋಸಿಸ್ ತಿಳಿಸಿದೆ. 'ಯುನಿಸಿಸ್' ಕಂಪನಿಯ ಸಹಭಾಗಿತ್ವದೊಂದಿಗೆ ಇನ್ಫೋಸಿಸ್ ಸಂಸ್ಥೆಯು ಜಾಗತಿಕ ಡೆಸ್ಕ್-ಸೈಡ್ ಸಪೋರ್ಟ್ ಮತ್ತು ಸರ್ವಿಸ್ ಡೆಸ್ಕ್ ಸೇವೆಗಳನ್ನು ಒದಗಿಸಲಿದೆ.

ಹಲವು ಪ್ರಮುಖ ವಿಭಾಗಗಳಲ್ಲಿ ತನ್ನ ಮಾರಾಟ ಪ್ರಮಾಣ ಕುಸಿದ ನಂತರ ಮೈಕ್ರೋಸಾಫ್ಟ್ ವೆಚ್ಚ ಕಡಿತಕ್ಕೆ ಮುಂದಾಗಿರುವುದು ಇನ್ನೂ ರಹಸ್ಯವಾಗಿ ಉಳಿದಿಲ್ಲ. 2010ರ ಮಧ್ಯಭಾಗದ ಹೊತ್ತಿಗೆ ಈ ಸಾಫ್ಟ್‌ವೇರ್ ದಿಗ್ಗಜ, ಕನಿಷ್ಠ 5,000 ನೌಕರರನ್ನು ಕೈ ಬಿಡುವ ಯೋಜನೆಯನ್ನು ಪೂರ್ತಿಗೊಳಿಸುವ ನಿರೀಕ್ಷೆಗಳನ್ನು ಹೊಂದಿದೆ. ಇದರಿಂದ ವಾರ್ಷಿಕವಾಗಿ 1.5 ಬಿಲಿಯನ್ ಡಾಲರ್ ಉಳಿತಾಯ ಮಾಡುವ ಯೋಚನೆ ಕಂಪನಿಯದ್ದು.

ಭಾರತದ ಬಹುದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲೊಂದಾದ ಇನ್ಫೋಸಿಸ್ ಸಂಸ್ಥೆಯ ಜತೆಗಿನ ಒಪ್ಪಂದದಿಂದಾಗಿ ಮೈಕ್ರೋಸಾಫ್ಟ್ ಕಂಪನಿಯ ಉದ್ಯೋಗಿಗಳ ನೌಕರಿಗೆ ಕುತ್ತು ಬರುತ್ತಿದೆಯೇ ಎಂಬುದು ಇನ್ನೂ ಅಸ್ಪಷ್ಟ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಕ್ರೋಸಾಫ್ಟ್, ಇನ್ಫೋಸಿಸ್