ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂಬೈ-ಜೊಹಾನ್ಸ್‌ಬರ್ಗ್‌‌ಗೆ ನೇರ ವಿಮಾನ: ಜೆಟ್ (Jet Airways | Flights | Mumbai | Johannesburg)
Bookmark and Share Feedback Print
 
ದೇಶದ ಖಾಸಗಿ ವಿಮಾನ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಏರ್‌ವೇಸ್, ಮುಂಬೈನಿಂದ-ಜೊಹಾನ್ಸ್‌ಬರ್ಗ್‌ಗೆ ನೇರ- ವಿಮಾನ ಸಂಚಾರ ಆರಂಭಿಸಿದೆ.

ಮುಂಬೈನಿಂದ-ಜೊಹಾನ್ಸ್‌ಬರ್ಗ್‌ಗೆ ಏರ್‌ಬಸ್ 330-200 ವಿಮಾನ ಹಾರಾಟ ನಡೆಸಲಿದೆ ಎಂದು ಜೆಟ್‍‌ಏರ್‌ವೇಸ್ ವಿಮಾನಯಾನ ಸಂಸ್ಥೆ, ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಹೆಚ್ಚಿನ ಸಂಖ್ಯೆಯ ಜನತೆ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಉಭಯ ದೇಶಗಳ ನಡುವಣ ವಹಿವಾಟು ಉತ್ತಮವಾಗಿರುವುದರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನೇರ ವಿಮಾನ ಸಂಚಾರ ಆರಂಭಿಸಲಾಗಿದೆ ಎಂದು ಜೆಟ್‌ ಏರ್‌ವೇಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕೊಸ್ ಕರ್ದಾಸಿಸ್ ಹೇಳಿದ್ದಾರೆ.

ಜೊಹಾನ್ಸ್‌ಬರ್ಗ್‌ನಿಂದ ಆಫ್ರಿಕಾದ ಇತರ ನಗರಗಳಾದ ಹರಾರೆ, ವಿಕ್ಟೊರಿಯಾ ಫಾಲ್ಸ್,ವೈಂಡ್‌ಹುಕ್, ಲಿವಿಂಗ್ ಸ್ಟೊನ್, ಬ್ಲಾಂಟೈರ್ ಬುಲವಾಯೊ ಗಬೊರೊನೆ,ಮಪುಟೊ,ಕಿನ್‌ಶಾಸ್ ಮತ್ತು ಲಾಗೊಸ್ ಸೇರಿದಂತೆ ಇತರ ನಗರಗಳಿಗೆ ನೇರ ಸಂಪರ್ಕ ದೊರೆಯಲಿದೆ.

ಜೆಟ್‌ಏರ್‌ವೇಸ್‌ನ ಅಂತಾರಾಷ್ಟ್ರೀಯ ವಿಮಾನ ಹಾರಾಟದಲ್ಲಿ ಜೊಹಾನ್ಸ್‌ಬರ್ಗ್ 23ನೇ ನಗರವಾಗಿದೆ.ಸಂಸ್ಥೆ ಪ್ರಸ್ತುತ ನ್ಯೂಯಾರ್ಕ್, ಟೊರೊಂಟೊ, ಬ್ರುಸೆಲ್ಸ್, ಲಂಡನ್, ಹಾಂಗ್‌ಕಾಂಗ್, ಸಿಂಗಾಪೂರ್, ಕೌಲಾಲುಂಪುರ್, ಕೊಲಂಬೊ, ಬ್ಯಾಂಕಾಕ್, ಕಾಠ್ಮಂಡು, ಢಾಕಾ ಮತ್ತು ಕುವೈತ್ ಸೇರಿದಂತೆ ಇತರ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ