ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತ್ಯಂ ಸುಸ್ಥಿತಿಗೆ ಕಾಲಾವಕಾಶ ಅಗತ್ಯ:ಮಹೀಂದ್ರಾ (Satyam| Mahindras | Anand Mahindra)
Bookmark and Share Feedback Print
 
ವಂಚನೆಪೀಡಿತ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಸಾಫ್ಟ್‌ವೇರ್ ಸಂಸ್ಥೆಯನ್ನು ಖರೀದಿಸಿದ ಮಹೀಂದ್ರಾ, ಒಂದು ವರ್ಷದ ಅವಧಿಯಲ್ಲಿ ಕೆಲಮಟ್ಟಿಗೆ ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದರೂ ಮತ್ತಷ್ಟು ಕಾಲವಕಾಶ ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹೀಂದ್ರಾ ಗ್ರೂಪ್‌‌ನ ಉಪಾಧ್ಯಕ್ಷ ಆನಂದ್ ಮಹೀಂದ್ರಾ ಮಾತನಾಡಿ, ಸತ್ಯಂ ಕಂಪ್ಯೂಟರ್ಸ್‌ ಖರಿದೀಸಿರುವುದಕ್ಕೆ ತಮಗಾಗಲಿ ಮತ್ತು ಅಡಳಿತ ಮಂಡಳಿಗಾಗಲಿ ಪಶ್ಚಾತಾಪವಾಗಿಲ್ಲ.ಸಂಪೂರ್ಣ ಸುಧಾರಣೆಗೆ ಮತ್ತಷ್ಟು ಕಾಲವಕಾಶ ಅಗತ್ಯವಿದೆ ಎಂದು ಸತ್ಯಂ ಖರೀದಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ತಿಳಿಸಿದ್ದಾರೆ.

ಮಹೀಂದ್ರಾ ಸತ್ಯಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಪಿ.ಗುರ್ನಾನಿ ಮಾತನಾಡಿ, ಸತ್ಯಂ ಕಳೆದುಕೊಂಡಿರುವ ಮಾರುಕಟ್ಟೆಯನ್ನು ಮರಳಿ ಪಡೆಯಲು ಸುಮಾರು ಕನಿಷ್ಠ ಎರಡು ವರ್ಷಗಳ ಅವಶ್ಯಕತೆಯಿದೆ. ಸತ್ಯಂ ಖರೀದಿಸಿ ಕೇವಲ ಒಂದು ವರ್ಷವಾಗಿದ್ದು, ಲಾಭದತ್ತ ಮರಳುತ್ತಿದೆ ಎಂದರು.

ಕಂಪೆನಿಯ ಕೆಟ್ಟ ಪರಿಸ್ಥಿತಿ ಅಂತ್ಯವಾಗಿದೆ.ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಮುಂಬರುವ ದಿನಗಳಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ಜಾಗತಿಕ ಸಾಫ್ಟ್‌ವೇರ್ ವಹಿವಾಟು ಮೇರುಗತಿಯಲ್ಲಿದೆ ಎಂದು ಗುರ್ನಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ