ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ಏರಿಕೆ: ಶೇ.9.9ಕ್ಕೆ ತಲುಪಿದ ಹಣದುಬ್ಬರ ದರ (Inflation | Sugar | Pulses | Pranab Mukherjee)
Bookmark and Share Feedback Print
 
ಸಗಟು ಸೂಚ್ಯಂಕ ಹಣದುಬ್ಬರ ದರ ಮಾರ್ಚ್ ತಿಂಗಳಾಂತ್ಯಕ್ಕೆ ಶೇ.9.9ಕ್ಕೆ ತಲುಪಿದೆ.ಫೆಬ್ರವರಿ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.89ಕ್ಕೆ ತಲುಪಿತ್ತು.

ಸಕ್ಕರೆ ಮತ್ತು ದ್ವಿದಳ ಧಾನ್ಯಗಳ ದರ ಏರಿಕೆ ಸೇರಿದಂತೆ ಇತರ ಅಗತ್ಯ ವಸ್ತುಗಳ ದರಗಳಲ್ಲಿ ಏರಿಕೆಯಾಗಿದ್ದರಿಂದ,ಹಣದುಬ್ಬರದಲ್ಲಿ ಏರಿಕೆಯಾಗಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿದೆ.

ಏಪ್ರಿಲ್‌ 3ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.17.70ರಿಂದ ಶೇ.17.22ಕ್ಕೆ ಇಳಿಕೆ ಕಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಲೂಗಡ್ಡೆ ಮತ್ತು ಈರುಳ್ಳಿ ದರಗಳಲ್ಲಿ ಶೇ.23.71ರಷ್ಟು ಇಳಿಕೆಯಾಗಿದ್ದರಿಂದ, ಅಹಾರ ಹಣದುಬ್ಬರದ ಕುಸಿತಕ್ಕೆ ಕಾರಣವಾಗಿತ್ತು.

ಮಾಸಿಕ ಹಣದುಬ್ಬರದ ಅಂತಿ ಅಂಶಗಳ ಪ್ರಕಾರ,ಮಾರ್ಚ್ ತಿಂಗಳ ಅವಧಿಯಲ್ಲಿ ಸಕ್ಕರೆ ದರದಲ್ಲಿ ಶೇ.48.75ರಷ್ಟು ಏರಿಕೆಯಾಗಿತ್ತು.ದ್ವಿದಳ ಧಾನ್ಯಗಳ ದರಗಳಲ್ಲಿ ಕೂಡಾ ಶೇ.21.40 ರಷ್ಟು ದರ ಏರಿಕೆಗೆ ಕಾರಣವಾಗಿದೆ.

ಏತನ್ಮಧ್ಯೆ, ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹಣದುಬ್ಬರ ಅಂಕಿ ಅಂಶಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ಹಣದುಬ್ಬರ ದರ ಮಾರ್ಚ್ ತಿಂಗಳ ಅವಧಿಯಲ್ಲಿ ಎರಡಂಕಿಗೆ ತಲುಪಲಿದೆ ಎಂದು ನಾನು ಆತಂಕ ವ್ಯಕ್ತಪಡಿಸಿದ್ದೆ.ಆದರೆ ಎರಡಂಕಿಗೆ ತಲುಪಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ