ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಹೆಚ್ಚಳ (Tata Motors | Commercial | Passenger | Vehicles.)
Bookmark and Share Feedback Print
 
ದೇಶದ ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಪ್ರಯಾಣಿಕ ಮತ್ತು ವಾಣಿಜ್ಯಿಕ ವಾಹನಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಮಾರ್ಚ್ ತಿಂಗಳ ಅವಧಿಯ ಜಾಗತಿಕ ವಾಹನಗಳ ಮಾರಾಟದಲ್ಲಿ ಶೇ.39ರಷ್ಟು ಏರಿಕೆಯಾಗಿ 1,01,712 ವಾಹನಗಳನ್ನು ಮಾರಾಟ ಮಾಡಲಾಗಿದೆ.

2009-10ರ ಅವಧಿಯ ವಾಹನಗಳ ಮಾರಾಟದಲ್ಲಿ ಶೇ.19 ರಷ್ಟು ಹೆಚ್ಚಳವಾಗಿ 8,72,951 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ ತಿಂಗಳ ಅವಧಿಯಲ್ಲಿ ಐಷಾರಾಮಿ ಜಾಗ್ವಾರ್ ಲಾಂಡ್ ರೋವರ್‌ನ 23,538 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ವಾಹನಗಳ ಮಾರಾಟದಲ್ಲಿ ಶೇ.43ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.53ರಷ್ಟು ಹೆಚ್ಚಳವಾಗಿ, 47,936 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.

2009-10ರ ಅವಧಿಯಲ್ಲಿ ಜಾಗ್ವಾರ್ ಲಾಂಡ್ ರೊವರ್ ಕಾರುಗಳ ಮಾರಾಟದಲ್ಲಿ ಶೇ.11ರಷ್ಟು ಕುಸಿತವಾಗಿ, ಜಾಗತಿಕ ವಾಹನಗಳ ಮಾರಾಟ 1,93,982 ವಾಹನಗಳಿಗೆ ಕುಸಿತವಾಗಿತ್ತು ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ