ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಫೋಸಿಸ್ ಶೇರು ದರಗಳಲ್ಲಿ ಭಾರಿ ಏರಿಕೆ (Infosys shares|Infosys sales|Infosys stock)
Bookmark and Share Feedback Print
 
ವಿದೇಶಗಳಿಂದ ಹೊರಗುತ್ತಿಗೆ ಸೇವೆಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ದೇಶದ ಎರಡನೇ ಬೃಹತ್ ಸಾಫ್ಟ್‌ವೇರ್ ಕಂಪೆನಿಯಾದ ಇನ್ಫೋಸಿಸ್ ಟೆಕ್ನಾಲಾಜೀಸ್ ಶೇರುಗಳು ಶೇರುಪೇಟೆಯಲ್ಲಿ ಗರಿಷ್ಠ ಏರಿಕೆ ಕಂಡಿವೆ.

ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಏರಿಕೆ ಹಾಗೂ ಗರಿಷ್ಠ ವೇತನ ಪಾವತಿಯ ಮಧ್ಯೆಯು,2011ರಲ್ಲಿ ಇನ್ಫೋಸಿಸ್ ವಹಿವಾಟಿನಲ್ಲಿ ಭಾರಿ ಏರಿಕೆ ಕಾಣಲಿದೆ ಎನ್ನುವ ವರದಿಗಳಿಂದಾಗಿ ಶೇೈರು ದರಗಳಲ್ಲಿ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶೇರುಪೇಟೆಯ ಇಂದಿನ ಆರಂಬಿಕ ವಹಿವಾಟಿನಲ್ಲಿ ಇನ್ಫೋಸಿಸ್ ಶೇರು ದರಗಳಲ್ಲಿ ಶೇ.1.5ರಷ್ಟು ಏರಿಕೆಯಾಗಿ 2,823.80 ರೂಪಾಯಿಗಳಿಗೆ ತಲುಪಿದೆ.

ಮತ್ತೊಂದು ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್, ಮಾರ್ಚ್ ತಿಂಗಳ ತ್ರೈಮಾಸಿಕ ಅವಧಿಯ ಫಲಿತಾಂಶದಲ್ಲಿ ಶೇ.38ರಷ್ಟು ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ