ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್‌ನಲ್ಲಿ ರೆಪೋ, ಸಿಆರ್‌ಆರ್‌ ದರಗಳ ಏರಿಕೆ (Barclays Capital | RBI | CRR | Inflation)
Bookmark and Share Feedback Print
 
ಹಣದುಬ್ಬರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 20 ರಂದು ನಡೆಸಲಿರುವ ಪರಿಷ್ಖರಣ ಸಭೆಯಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಬಾರ್ಕ್‌ಲೆ ಕ್ಯಾಪಿಟಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಮಾರುಕಟ್ಟೆಗಳಲ್ಲಿ ನಗದು ಹಣದ ಹರಿವನ್ನು ನಿಯಂತ್ರಿಸಲು, ಕ್ಯಾಶ್ ರಿಸರ್ವ್ ರೇಶಿಯೋ ಕೂಡಾ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡುವ ನಿರೀಕ್ಷೆಗಳಿವೆ ಎಂದು ಬಾರ್ಕ್‌ಲೆ ಮೂಲಗಳು ತಿಳಿಸಿವೆ.

ಮುಂಬರುವ ದಿನಗಳಲ್ಲಿ ವಾರ್ಷಿಕ ಹಣದುಬ್ಬರ ದರ ಎರಡಂಕಿಗೆ ತಲುಪುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಬಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಲಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಭಾರತದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7.2ಕ್ಕೆ ತಲುಪಲಿದೆ.ಹಣದುಬ್ಬರದ ಏರಿಕೆಯ ಸಮಯದಲ್ಲಿ ಬಡ್ಡಿ ದರಗಳಲ್ಲಿ ಕೂಡಾ ಹೆಚ್ಚಳವಾಗಲಿರುವುದರಿಂದ, ಆರ್‌ಬಿಐ ಅನಿವಾರ್ಯವಾಗಿ ಕಠಿಣ ನೀತಿಗಳನ್ನು ಅನುಸರಿಸಬೇಕಾಗಿದೆ ಎಂದು ಬಾರ್ಕ್‌ಲೆ ಕ್ಯಾಪಿಟಲ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ