ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಸ್ರೇಲ್‌ನಲ್ಲಿ ಆಪಲ್ ಐಪ್ಯಾಡ್‌ ನಿಷೇಧ (Israel | Apple | iPad | National standards | Customs)
Bookmark and Share Feedback Print
 
PTI
ರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಲ್ಲದ ವೈರ್‌ಲೆಸ್ ತರಂಗಾಂತರಗಳ ಕಳವಳದಿಂದಾಗಿ, ಆಪಲ್ ಐಪ್ಯಾಡ್‌ ಉತ್ಪನ್ನಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಇಸ್ರೇಲ್ ಮೂಲಗಳು ತಿಳಿಸಿವೆ.

ಸರಕಾರ ನೂತನ ನಿಯಮಗಳನ್ನು ಘೋಷಿಸಿದ ನಂತರ 10 ಐಪ್ಯಾಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟೆಲಿಕಾಂ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪ್ರಸಾರ ಗುಣಮಟ್ಟಕ್ಕೆ ಗಣಕಯಂತ್ರ ಅನುಸರಣೆ ಮಾಡುತ್ತಿವೆ ಎನ್ನುವುದು ಖಚಿತವಾಗುವವರೆಗೆ, ಇಸ್ರೇಲ್‌ಗೆ ಆಗಮಿಸುವ ಪ್ರವಾಸಿಗರು ಕೂಡಾ ಐಪ್ಯಾಡ್‌ಗಳನ್ನು ದೇಶದೊಳಗೆ ತರುವಂತಿಲ್ಲ ಎಂದು ಸರಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ಗೆ ಆಗಮಿಸುವ ಪ್ರವಾಸಿಗರು ತಮ್ಮ ಐಪ್ಯಾಡ್‌ನ್ನು ಕಸ್ಟಮ್ಸ್ ಅಧಿಕಾರಿ‌ಗಳ ಬಳಿ ಜಮಾವಣೆ ಮಾಡಬೇಕಿದ್ದು, ನಂತರ ದೇಶದಿಂದ ತೆರಳುವ ಸಂದರ್ಭದಲ್ಲಿ, ಪ್ರವಾಸಿಗರಿಗೆ ಐಪ್ಯಾಡ್‌ಗಳನ್ನು ಮರಳಿಸಲಾಗುವುದು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ