ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಡಿಎಫ್‌ಸಿ ಗೃಹ ಸಾಲ ಬಡ್ಡಿ ದರ ಇಳಿಕೆ (HDFC | Interest rates | New scheme)
Bookmark and Share Feedback Print
 
ದೇಶದ ಆರ್ಥಿಕತೆ ಜಟಿಲವಾಗುತ್ತಿರುವುದರಿಂದ ಬಡ್ಡಿ ದರ ಹೆಚ್ಚಳದ ನಿರೀಕ್ಷೆಯ ಮಧ್ಯೆ, ಗೃಹಸಾಲ ನೀಡುವ ಪ್ರಮುಖ ಬ್ಯಾಂಕ್‌ ಎಚ್‌ಡಿಎಫ್‌ಸಿ,ಬಡ್ಡಿದರಗಳಲ್ಲಿ ಕಡಿತಗೊಳಿಸಿ ಪ್ರತಿಯೊಬ್ಬರಿಗೆ ಆಶ್ಚರ್ಯ ಮೂಡಿಸಿದೆ.

ಪ್ರಸ್ತುತ ಗೃಹಸಾಲದ ಬಡ್ಡಿ ದರ ಆರಂಭಿಕ ವರ್ಷದಲ್ಲಿ ಶೇ.8.75ಕ್ಕೆ ನಿಗದಿಪಡಿಸಲಾಗಿತ್ತು. ಅದರೆ ಏಪ್ರಿಲ್ 30ರಿಂದ ಜೂನ್ 30ರವರೆಗೆ ಗೃಹಸಾಲ ಪಡೆಯುವ ಗ್ರಾಹಕರಿಗೆ ಬಡ್ಡಿದರವನ್ನು ಶೇ.8.25ಕ್ಕೆ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಪ್ರಸಕ್ತ ತಿಂಗಳ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಬಡ್ಡಿ ದರಗಳಲ್ಲಿ ಇಳಿಕೆ ಮಾಡುವ ಮೂಲಕ ಎಚ್‌ಡಿಎಫ್‌ಸಿ ಗ್ರಾಹಕರನ್ನು ಸೆಳೆಯುವ ತಂತ್ರ ರೂಪಿಸಿದೆ ಎನ್ನಲಾಗಿದೆ.

ನೂತನ ಯೋಜನೆಯನ್ವಯ ಗೃಹ ಸಾಲ ಪಡೆಯುವ ಗ್ರಾಹಕರಿಗೆ ಮುಂಬರುವ ಮಾರ್ಚ್ 2011ರ ವರೆಗೆ ಆರಂಭಿಕ ವರ್ಷದಲ್ಲಿ ಶೇ.8.25ರಷ್ಟು ಸ್ಥಿರ ಬಡ್ಡಿ ದರ ಮತ್ತು ಎರಡನೇ ವರ್ಷದಲ್ಲಿ ಶೇ.9ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿದೆ. ನಂತರ ಬಡ್ಡಿ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರೇಣು ಸೂದ್ ಕರ್ನಾಡ್ ತಿಳಿಸಿದ್ದಾರೆ.

ಎಚ್‌ಡಿಎಫ್‌‌ಸಿ ಬ್ಯಾಂಕ್, ಪ್ರಸ್ತುತ ನಿಗದಿಪಡಿಸಿರುವ ಬಡ್ಡಿ ದರದೊಂದಿಗೆ ಮುಂದುವರಿಯಲಿದೆ.30 ಲಕ್ಷ ರೂಪಾಯಿ ವರೆಗಿನ ಗೃಹಸಾಲಕ್ಕೆ ಶೇ.8.75ರಷ್ಟು ಬಡ್ಡಿ ದರ, 30ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳವರೆಗಿನ ಗೃಹಸಾಲಕ್ಕೆ ಶೇ.8ರ ಬಡ್ಡಿ ದರ ಹಾಗೂ 50 ಲಕ್ಷಕ್ಕಿಂತ ಮೇಲ್ಪಟ್ಟ ಗೃಹಸಾಲದ ಮೇಲಿನ ಬಡ್ಡಿ ದರವನ್ನು ಶೇ.9.25ಕ್ಕೆ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ
ಸಂಬಂಧಿತ ಮಾಹಿತಿ ಹುಡುಕಿ