ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡೆಕ್ಕನ್‌ ಏರ್‌ಲೈನ್ಸ್‌ನಲ್ಲಿ ಹೂಡಿಕೆ:ಅಂಬಾನಿ ಘೋಷಣೆ (RIL investment | Deccan 360 | Cargo airlines| Deccan 360)
Bookmark and Share Feedback Print
 
ಕ್ಯಾಪ್ಟನ್ ಗೋಪಿನಾಥ್ ಮುಂಡೆ ಸಂಸ್ಥಾಪಿತ ಡೆಕ್ಕನ್ ಏರ್‌ಲೈನ್ಸ್‌ನಲ್ಲಿ ಹೂಡಿಕೆ ಮಾಡಲು ಮುಕೇಶ್ ್ಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್ ಯೋಜನೆಯನ್ನು ರೂಪಿಸಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.

ಡೆಕ್ಕನ್ ಏರ್‌ಲೈನ್ಸ್‌ನಲ್ಲಿ ಹೂಡಿಕೆ ಮಾಡಲಾಗುವ ನಿಖರ ಮೊತ್ತದ ಬಗ್ಗೆ ಬಹಿರಂಗವಾಗಿಲ್ಲ. ಆದರೆ ಡೆಕ್ಕನ್ ಏರ್‍‌ಲೈನ್‌ನಲ್ಲಿ ಹೂಡಿಕೆ ಮಾಡಲು ರಿಲಯನ್ಸ್ ಚರ್ಚೆಯನ್ನು ಆರಂಭಿಸಿದೆ ಎಂದು ಅನಾಮಧೇಯರಾಗಿರಲು ಬಯಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಡೆಕ್ಕನ್‌ ಏರ್‌ಲೈನ್ಸ್‌ನೊಂದಿಗೆ ರಿಲಯನ್ಸ್ ಜಂಟಿ ಸಹಭಾಗಿತ್ವ ವಹಿಸಿದಲ್ಲಿ, ದೇಶಿಯ ಕಾರ್ಯ ವಿಧಾನಗಳಲ್ಲಿ ಸಂಪೂರ್ಣ ಬದಲಾಗಲಿದೆ ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಿಲಯನ್ಸ್ ಹೂಡಿಕೆಯಿಂದ ಡೆಕ್ಕನ್ ಏರ್‌ಲೈನ್ಸ್ ಆರ್ಥಿಕ ಸಂಕಷ್ಟದಿಂದ ಹೊರಬಂದು, ದೇಶದ ವೈಮಾನಿಕ ಕ್ಷೇತ್ರದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ವಿಸ್ತಾರವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಡೆಕ್ಕನ್ ಏರ್‌ಲೈನ್ಸ್ ಮಹಾರಾಷ್ಟ್ರದ ನಾಗ್ಪುರ್‌ನಲ್ಲಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು, 50 ಏಕರೆ ಭೂಮಿಯನ್ನು ಖರೀದಿಸಿದ್ದು,ಸರಕು ಸಾಗಾಣೆಗಾಗಿ 8 ವಿಮಾನ ಗಳ ಸೇವೆಯನ್ನು ಒದಗಿಸುತ್ತಿದೆ. 15 ವಿಮಾನನಿಲ್ದಾಣಗಳಲ್ಲಿ ಸರಕು ಸಾಗಾಣೆ ಸೇವೆ ನೀಡುತ್ತಿದೆ. ದೇಶಾದ್ಯಂತ 300 ಟ್ರಕ್‌ಗಳು ಹಾಗೂ 850 ವಾಹನಗಳನ್ನು ಹೊಂದಿದೆ ಎಂದು ಡೆಕ್ಕನ್ ಏರ್‌ಲೈನ್ಸ್ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ..
ಸಂಬಂಧಿತ ಮಾಹಿತಿ ಹುಡುಕಿ