ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಬಡ್ಡಿ ದರಗಳ ಏರಿಕೆಯಿಲ್ಲ: ಒ.ಪಿ.ಭಟ್ (State Bank Of India | interest rates)
Bookmark and Share Feedback Print
 
ಸಾಲ ವಿತರಣೆ ನಿಧಾನಗತಿಯಲ್ಲಿರುವುದರಿಂದ, ಮುಂಬರುವ ಎರಡು ಮೂರು ತಿಂಗಳ ಅವಧಿಯೊಳಗೆ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆಗಳಿಲ್ಲ. ಆದ್ದರಿಂದ ಏಪ್ರಿಲ್-ಜೂನ್‌ವರೆಗೆ ಬಡ್ಡಿ ದರಗಳು ಸ್ಥಿರವಾಗಿರಲಿವೆ ಎಂದು ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.

ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನಗದು ಹಣದ ಹರಿವು ಹೆಚ್ಚಳವಾಗಿರುವುದರಿಂದ, ಮುಂದಿನ ಜೂನ್ ತಿಂಗಳ ಅವಧಿಯೊಳಗೆ ಬಡ್ಡಿ ದರಗಳಲ್ಲಿ ಏರಿಕೆಯಿಲ್ಲ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್‌ 20 ರಂದು ಪರಿಷ್ಕರಣ ಸಭೆ ನಡೆಸಲಿದ್ದು, ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ನಂತರ ಬಡ್ಡಿ ದರಗಳ ಏರಿಕೆ ಕುರಿತಂತೆ ನಿರ್ಧರಿಸಲಾಗುವುದು ಎಂದು ಭಟ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ