ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ಧಾನ್ಯಗಳ ಅಮುದು ವಹಿವಾಟಿನಲ್ಲಿ ಹೆಚ್ಚಳ (Import | Dairy products | Foodgrains | Fiscal | Food inflation.)
Bookmark and Share Feedback Print
 
ಅಹಾರ ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ, ಕಳೆದ ವರ್ಷದ ಆರ್ಥಿಕ ಸಾಲಿನ ಏಪ್ರಿಲ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳ ಅಮುದಿನಲ್ಲಿ ಶೇ.600ರಷ್ಟು ಏರಿಕೆಯಾಗಿದ್ದು, ಅಹಾರಧಾನ್ಯಗಳ ಅಮುದು ವಹಿವಾಟಿನಲ್ಲಿ ಶೇ.90ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಖಾದ್ಯ ತೈಲ, ಚಹಾ ಮತ್ತು ಕಾಫಿ ಸೇರಿದಂತೆ ಇತರ ಅಮುದು ವಸ್ತುಗಳ ವಹಿವಾಟಿನಲ್ಲಿ ಕೂಡಾ ಕ್ರಮವಾಗಿ ಶೇ.71.6ರಷ್ಟು ಹಾಗೂ ಶೇ.68.2ರಷ್ಟು ಏರಿಕೆಯಾಗಿದೆ.

ಖಾದ್ಯ ತೈಲದ ವಹಿವಾಟು ಏಪ್ರಿಲ್-ಡಿಸೆಂಬರ್ ತಿಂಗಳ ವಹಿವಾಟು 10,933 ಕೋಟಿ ರೂಪಾಯಿಗಳಿಂದ, 18,757 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಚ್ಚಾ ಪಾಮ್ ತೈಲ ಸೇರಿದಂತೆ ಇತರ ವಸ್ತುಗಳ ಅಮುದು ವಹಿವಾಟಿನಲ್ಲಿ ಹೆಚ್ಚಳವಾಗಲಿದೆ..

ಹಾಲು ಮತ್ತು ಡೈರಿ ಉತ್ಪನ್ನಗಳ ಅಮುದು ವಹಿವಾಟು 34.05 ಕೋಟಿ ರೂಪಾಯಿಗಳಿಂದ 234.44 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಶೇ.588.4 ರಷ್ಟು ಹೆಚ್ಚಳವಾಗಲಿದೆ. ಚಹಾ ಮತ್ತು ಕಾಫಿ ಅಮುದು 130 ಕೋಟಿ ರೂಪಾಯಿಗಳಿಂದ 219 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಲಿದೆ.

ವಾರ್ಷಿಕ ಹಣದುಬ್ಬರ ದರ 2009ರ ಕೊನೆಯ ತಿಂಗಳಲ್ಲಿ ಗರಿಷ್ಠ ಏರಿಕೆಯನ್ನು ಕಂಡಿದ್ದು, ನವೆಂಬರ್ ತಿಂಗಳ ಅವಧಿಯಲ್ಲಿ ಶೇ.19ರಷ್ಟು ಏರಿಕೆ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ