ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 5 ಸಾವಿರ ಕೋಟಿಗೆ ತಲುಪಿದ 3ಜಿ ಹರಾಜು (3G spectrum| licence bid)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜು ಆರನೇ ದಿನಕ್ಕೆ ಕಾಲಿರಿಸಿದ್ದು,ಸುಮಾರು 5000 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಸ್ತುತ ಪರಿಸ್ಥಿತಿಯಲ್ಲಿ 3ಜಿ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ 20,700 ಕೋಟಿ ರೂಪಾಯಿಗಳ ಆದಾಯವಾಗಲಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಆದಾಯ ಹೆಚ್ಚಳವಾಗುವ ಸಾಧ್ಯತೆಗಳಿವೆಯ ಕೇಂದ್ರ ಸರಕಾರ 3ಜಿ ಹಾಗೂ ಬಿಡಬ್ಲೂಎ ತರಂಗಾಂತರಗಳ ಹರಾಜಿನಿಂದ 30,000-35,000 ಕೋಟಿ ರೂಪಾಯಿಗಳ ಆದಾಯದ ಗುರಿಯನ್ನು ಹೊಂದಿದೆ.

ದೇಶಾದ್ಯಂತ 3ಜಿ ಹರಾಜು ಬಿಡ್‌ನಲ್ಲಿ ಶೇ.43ರಷ್ಟು ಹೆಚ್ಚಳವಾಗಿ ,5,015 ಕೋಟಿ ರೂಪಾಯಿಗಳಿಗೆ ತಲುಪಿದೆ. ಕೇಂದ್ರ ಸರಕಾರ 3500 ಕೋಟಿ ರೂಪಾಯಿಗಳನ್ನು ಮೀಸಲು ದರವಾಗಿ ಘೋಷಿಸಿದೆ.

ಗುರುವಾರದಂದು 4,831 ಕೋಟಿ ರೂಪಾಯಿಗಳಿಗೆ ತಲುಪಿದ್ದ 3ಜಿ ಹರಾಜು,ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಶೇ.3.8ರಷ್ಟು ಹೆಚ್ಚಳವಾಗಿದೆ.

3ಜಿ ತರಂಗಾಂತರಗಳ ಹರಾಜಿನ 34ನೇ ಸುತ್ತಿನಲ್ಲಿ ಗುಜರಾತ್ 512.6 ಕೋಟಿ ರೂಪಾಯಿಗಳ ಬಿಡ್ ಮೊತ್ತ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ದೆಹಲಿ ಬಿಡ್ ಮೊತ್ತ 493 ಕೋಟಿ ರೂಪಾಯಿಗಳಿಗೆ ತಲುಪಿ ಎರಡನೇ ಸ್ಥಾನದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ