ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ಭಧ್ರತಾ ಮಸೂದೆ: ಯೋಜನಾ ಆಯೋಗ ಸಭೆ (Planning commission|FSA|Food Security Act)
Bookmark and Share Feedback Print
 
ರಾಷ್ಟ್ರೀಯ ಅಹಾರ ಸುರಕ್ಷಾ ಭಧ್ರತೆ ಕಾಯ್ದೆಯಿಂದಾಗಿ ದೇಶದ ಎಷ್ಟು ಜನತೆಗೆ ಲಾಭವಾಗಲಿದೆ ಎನ್ನುವ ಜಿಜ್ಞಾಸೆ ಸರಕಾರದ ಆಂತರಿಕ ವಲಯದಲ್ಲಿ ಕಾಡುತ್ತಿದೆ.

ಕೇಂದ್ರ ಯೋಜನಾ ಆಯೋಗದ ಸದಸ್ಯರು ಸಭೆ ಸೇರಿ, ಬಡತನದ ರೇಖೆಗಿಂತ ಕೆಳಗಿರುವ ಜನತೆ ಹಾಗೂ ತೆಂಡೂಲ್ಕರ್ ಸಮಿತಿ ಶಿಫಾರಸ್ಸು ಜಾರಿಗೊಳಿಸುವ ಕುರಿತಂತೆ ಚರ್ಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಂಡೂಲ್ಕರ್ ಸಮಿತಿ ಶಿಫಾರಸ್ಸಿನಂತೆ, ಭಾರತದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಶೇ.37.2ರಷ್ಟು ಜನತೆಗೆ ಅಹಾರ ಸುರಕ್ಷತೆ ಭಧ್ರತೆಯನ್ನು ಒದಗಿಸಬೇಕು ಎನ್ನುವ ವರದಿಗೆ ಕೇಂದ್ರ ಯೋಜನಾ ಆಯೋಗ ನಿರಾಸಕ್ತಿ ತೋರಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ,ಅಹಾರ ಸುರಕ್ಷತಾ ಭಧ್ರತೆ ಮಸೂದೆಯನ್ನು ಸರಕಾರ ಪರಿಗಣಿಸುವಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ, ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ಮತ್ತೊಮ್ಮೆ ಮಸೂದೆಯನ್ನು ಪರಿಶೀಲಿಸಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ