ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೆನೌಲ್ಟ್ ಶೇರುಗಳನ್ನು ಖರೀದಿಸಲಿರುವ ಮಹೀಂದ್ರಾ (Mahindra | Renault | Stake | Logan sedan | Car.)
Bookmark and Share Feedback Print
 
ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ,ಲೊಗಾನ್ ಸೆಡಾನ್ ಮಾಡೆಲ್‌ನ ಜಾಗತಿಕ ಕಾರು ತಯಾರಿಕೆ ಕಂಪೆನಿಯಾದ ರೆನೌಲ್ಟ್‌ನ ಶೇ.49ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ, ಮಹೀಂದ್ರಾ ರೆನೌಲ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿನ ಶೇ.49ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಿದ್ದು, ಶೇ.100ರಷ್ಟು ಮಾಲೀಕತ್ವವನ್ನು ಹೊಂದಲಿದೆ ಎಂದು ಮಹೀಂದ್ರಾ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ ಶೇರುಗಳನ್ನು ಖರೀದಿಸಿದ ನಂತರವನೂ ಇಂಜಿನ್ ಸೇರಿದಂತೆ ಬಿಡಿಭಾಗಗಳನ್ನು ಸರಬರಾಜು ಮಾಡಲಾಗುವುದು ಎಂದು ರೆನೌಲ್ಟ್ ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2005ರಲ್ಲಿ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ ಹಾಗೂ ರೆನೌಲ್ಟ್ ಕಂಪೆನಿ ಜಂಟಿ ಸಹಭಾಗಿತ್ವವನ್ನು ಸ್ಥಾಪಿಸಿತ್ತು.

ಉಭಯ ಕಂಪೆನಿಗಳ ಒಪ್ಪಂದದ ಪ್ರಕಾರ ಸುಮಾರು 18 ತಿಂಗಳ ಅವಧಿಗೆ ರೆನೌಲ್ಟ್ ಹೆಸರನ್ನು ಬಳಿಸಿಕೊಳ್ಳಲಿದ್ದು, ನಂತರ ಮಹೀಂದ್ರಾ ಲೋಗೋ ಹೆಸರನ್ನು ಬಳಸಿಕೊಳ್ಳಲಿದೆ. ಆದರೆ ಮಹೀಂದ್ರಾ ಕಂಪೆನಿಗೆ ಬಿಡಿಭಾಗಗಳ ಸರಬರಾಜು ಮುಂದುವರಿಯಲಿದೆ ಎಂದು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ