ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ 10ಗ್ರಾಂಗೆ 16,575 ರೂ. (Gold| Market | Bullion | Sell | Tumbles)
Bookmark and Share Feedback Print
 
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಕುಸಿತವಾಗಲಿದೆ ಎನ್ನುವ ವರದಿಗಳಿಂದಾಗಿ, ಹೂಡಿಕೆದಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಚಿನ್ನ, ಬೆಳ್ಳಿ ಸಂಗ್ರಹಕಾರರು ಹಾಗೂ ವರ್ತಕರು ಕೂಡಾ ಚಿನ್ನದ ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ದರಗಳಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಸ್ಟ್ಯಾಂಡರ್ಡ್ ಚಿನ್ನದ ದರದಲ್ಲಿ 185 ರೂಪಾಯಿಗಳಷ್ಟು ಕುಸಿತವಾಗಿ 16,575 ರೂಪಾಯಿಗಳಿಗೆ ತಲುಪಿದೆ.ಆಭರಣಗಳ ದರದಲ್ಲಿ ಕೂಡಾ 185 ರೂಪಾಯಿಗಳ ಕುಸಿತವಾಗಿ 16,660 ರೂಪಾಯಿಗಳಿಗೆ ತಲುಪಿದೆ.

ಬೆಳ್ಳಿ ದರ ಪ್ರತಿ ಕೆಜಿಗೆ 655 ರೂಪಾಯಿಗಳಷ್ಟು ಇಳಿಕೆಯಾಗಿ 27,695 ರೂಪಾಯಿಗಳಿಗೆ ತಲುಪಿದೆ.

ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 23.40 ಡಾಲರ್‌ಗಳಷ್ಟು ಕುಸಿತವಾಗಿ 1,136.90 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿ ದರ ಕೂಡಾ ಪ್ರತಿ ಔನ್ಸ್‌ಗೆ 76 ಸೆಂಟ್‌ಗಳಷ್ಟು ಇಳಿಕೆಯಾಗಿ 17.67 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ