ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಶ್ವ ಭಾರತದ ಬಗ್ಗೆ ಉದಾರತೆ ತೋರುತ್ತಿದೆ:ಪ್ರಧಾನಿ (World | India | Benign | Manmohan Singh)
Bookmark and Share Feedback Print
 
ಚೀನಾ ಹೊರತಪಡಿಸಿ ಬಾರತದ ಬಗ್ಗೆ ಜಗತ್ತಿನ ಹಲವಾರು ರಾಷ್ಟ್ರಗಳು ಉದಾರತೆಯನ್ನು ತೋರುತ್ತಿದ್ದು,ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ವಿಶ್ವ ಬಾರತದ ಬಗ್ಗೆ ಸಂಪೂರ್ಣವಾಗಿ ಉದಾರತೆ ತೋರುತ್ತಿದೆ.ನಾವು ಯಶಸ್ವಿಯಾಗಲು ಹಾರೈಸುತ್ತಿವೆ ಎಂದು ಪ್ರಧಾನಿ ಡಾ.ಸಿಂಗ್ ಬ್ರಿಕ್ ಶೃಂಗಸಭೆಯಲ್ಲಿ ಸುಮಾರು 50 ನಾಯಕರನ್ನು ಭೇಟಿ ಮಾಡಿ ದೇಶಕ್ಕೆ ಮರಳಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೀನಾದ ಆರ್ಥಿಕ ಬೆಳವಣೆಗೆಯಾಗದಿದ್ದಲ್ಲಿ ಬಾರತದ ಬೆಳವಣಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಉಭಯ ದೇಶಗಳ ಮಧ್ಯೆ ಸೌಹಾರ್ದತೆಯಲ್ಲಿ ಸುಧಾರಣೆಯಾಗಿದೆ. .

ವಿಶ್ವದ ಉದಾರತೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು.ವಿಶ್ವದ ಹಲವಾರು ರಾಷ್ಟ್ರಗಳು ಸದಾ ಕಾಲ ಉದಾರತೆ ತೋರುವ ಮೂಡ್‌ನಲ್ಲಿರುವುದಿಲ್ಲ. ಭಾರತ ದೇಶಿಯ ಸಮಸ್ಯೆಗಳಾದ ಬಡತನ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಬರಬೇಕಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಸಮಸ್ಯೆಗಳು ಆತಂರಿಕವಾಗಿವೆ. ಎಲ್ಲರು ಒಂದಾಗಿ ಕಾರ್ಯನಿರ್ವಹಿಸಬೇಕಾಗಿದೆ. ಒಗ್ಗಟ್ಟಿನಿಂದ ಮುಂದುವರಿದಲ್ಲಿ ಬಡತನ, ಅನಾರೋಗ್ಯ ಮತ್ತು ನಿರ್ಲಕ್ಷವನ್ನು ದೂರವಿರಿಸಬಹುದಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ