ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಶ್ವದ ಅಗ್ರ 50 ನಾವೀನ್ಯ ಕಂಪನಿಗಳಲ್ಲಿ ಟಾಟಾ, ರಿಲಯೆನ್ಸ್ (India | Tata Group | Reliance Industries | innovative company)
Bookmark and Share Feedback Print
 
ವಿಶ್ವದಲ್ಲೇ ಅತೀ ಹೆಚ್ಚು ಹೊಸತನವನ್ನು ಹೊಂದಿರುವ ಕಂಪನಿಗಳ ನೂತನ ಪಟ್ಟಿ ಬಿಡುಗಡೆಯಾಗಿದೆ. ಅಗ್ರ ಸ್ಥಾನದಲ್ಲಿ ಅಮೆರಿಕಾದ ಆಪಲ್ ಕಂಪ್ಯೂಟರ್ ಸಂಸ್ಥೆಯಿದ್ದರೆ, ಅಗ್ರ 50ರಲ್ಲಿ ಭಾರತೀಯ ಕಂಪನಿಗಳಾದ ಟಾಟಾ ಸಮೂಹ ಮತ್ತು ರಿಲಯೆನ್ಸ್ ಇಂಡಸ್ಟ್ರೀಸ್‌ಗಳು ಕಾಣಿಸಿಕೊಂಡಿವೆ.

ಭಾರತದ ಎರಡು ಕಂಪನಿಗಳಲ್ಲಿ ಟಾಟಾ ಗ್ರೂಪ್ ಅತೀ ಹೆಚ್ಚು ನಾವೀನ್ಯತೆಯ ಕಂಪನಿಯೆಂದು 17ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರೆ, ಮುಖೇಶ್ ಅಂಬಾನಿ ನೇತೃತ್ವದ ರಿಲಯೆನ್ಸ್ ಇಂಡಸ್ಟ್ರೀಸ್ 33ನೇ ಸ್ಥಾನದಲ್ಲಿದೆ.

ಮ್ಯಾಕ್ ಕಂಪ್ಯೂಟರುಗಳು, ಐಪಾಡ್ ಸಂಗೀತ ಸಾಧನಗಳು, ಟಚ್-ಸ್ಕ್ರೀನ್ ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ವಿಶ್ವಕ್ಕೇ ಪರಿಚಯಿಸಿದ ವಿನೂತನ ಸಂಸ್ಥೆ ಆಪಲ್ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಅದರ ಪ್ರಬಲ ಪ್ರತಿಸ್ಪರ್ಧಿ ಇಂಟರ್ನೆಟ್ ದೈತ್ಯ ಗೂಗಲ್ ಎರಡನೇ ಸ್ಥಾನದಲ್ಲಿ ಯಾವುದೇ ಧಕ್ಕೆಯಿಲ್ಲದೆ ಮುಂದುವರಿದಿದೆ ಎಂದು ಜಾಗತಿಕ ಅಧ್ಯಯನಾ ಸಂಸ್ಥೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಜತೆ ಸಹಭಾಗಿತ್ವ ಹೊಂದಿರುವ ಬ್ಯುಸಿನೆಸ್ ವೀಕ್ ನಿಯತಕಾಲಿಕ ಸಿದ್ಧಪಡಿಸಿರುವ ವಾರ್ಷಿಕ ರ‌್ಯಾಂಕಿಂಗ್‌ನಲ್ಲಿ ತಿಳಿಸಲಾಗಿದೆ.

ಅದೇ ಹೊತ್ತಿಗೆ ಏಷಿಯಾ ಖಂಡ ತಾಂತ್ರಿಕತೆಯಲ್ಲಿ ಪ್ರಬಲವಾಗುತ್ತಿರುವುದು ಅಮೆರಿಕಾದ ಪ್ರಭಾವವನ್ನು ಕಡಿಮೆ ಮಾಡುತ್ತಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 2006ರಲ್ಲಿ ಕೇವಲ ಐದು ಏಷಿಯಾ ಕಂಪನಿಗಳಿದ್ದ ಈ ಪಟ್ಟಿಯಲ್ಲೀಗ, 15 ಕಂಪನಿಗಳು ಸೇರ್ಪಡೆಗೊಂಡಿರುವುದೇ ಅಮೆರಿಕಾ ಜನಪ್ರಿಯತೆ ಕುಸಿಯುತ್ತಿರುವುದಕ್ಕೆ ಸಾಕ್ಷಿ.

ಅಲ್ಲದೆ ಅಗ್ರ 25ರಲ್ಲಿ ಮೊತ್ತ ಮೊದಲ ಬಾರಿಗೆ ಅಮೆರಿಕಾ ಭಾರೀ ಕುಸಿತ ಕಂಡಿದ್ದು, ಅಮೆರಿಕೇತರ ಕಂಪನಿಗಳು ಸ್ಥಾನ ಪಡೆದಿವೆ. ಭಾರತದ ಎರಡು ಕಂಪನಿಗಳು, ಜಪಾನ್‌ನ ಐದು, ಚೀನಾ ಮತ್ತು ತೈವಾನ್‌ನಿಂದ ಐದು, ದಕ್ಷಿಣ ಕೊರಿಯಾದಿಂದ ಮೂರು ಕಂಪನಿಗಳು ಇಲ್ಲಿ ಕಾಣಿಸಿಕೊಂಡಿವೆ. ಅದೇ ಹೊತ್ತಿಗೆ ರಿಲಯೆನ್ಸ್ ಮತ್ತು ಟಾಟಾ ಕಳೆದ ವರ್ಷದ ತಮ್ಮ ಸ್ಥಾನಕ್ಕಿಂತ ಈ ಬಾರಿ ಕುಸಿತ ಕಂಡಿವೆ. ಕಳೆದ ಬಾರಿ ಟಾಟಾ 13 ಹಾಗೂ ರಿಲಯೆನ್ಸ್ 15ನೇ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ