ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಂಚನೆ:ಇಬ್ಬರು ಅನಿವಾಸಿ ಭಾರತೀಯರಿಗೆ ನಿಷೇಧ (Britain| Fraud| NRIs)
Bookmark and Share Feedback Print
 
ಮಾರುಕಟ್ಟೆಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಹಣಕಾಸು ಸಂಸ್ಥೆಗಳ ಇಬ್ಬರು ಅನಿವಾಸಿ ಭಾರತೀಯ ವೃತ್ತಿಪರರಿಗೆ ಬ್ರಿಟನ್‌ನ ಹಣಕಾಸು ನಿಯಂತ್ರಕ ಮಂಡಳಿ, ನಿಷೇಧ ಹೇರಿ ದಂಡವನ್ನು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಅನಿವಾಸಿ ಭಾರತೀಯರಾದ ಸಮೀರ್ ಪಟೇಲ್ ಮತ್ತು ರಬಿನ್ ಛಾಬ್ರಾ ಅವರಿಗೆ ಮಾರುಕಟ್ಟೆ ವಂಚನೆ ಆರೋಪಕ್ಕಾಗಿ ತಲಾ 180,541 ಪೌಂಡ್‌ ಮತ್ತು 95,000 ಪೌಂಡ್‌ ದಂಡವನ್ನು ವಿಧಿಸಲಾಗಿದೆ.

ಫೈನಾನ್ಶಿಯಲ್ ಸರ್ವಿಸಸ್ ಅಥಾರಿಟಿ (ಎಫ್‌ಎಸ್‌ಎ), ಉಭಯ ಉದ್ಯಮಿಗಳಿಗೆ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸದಂತೆ ನಿಷೇಧ ಹೇರಿದೆ.


ಎವಾಲುವೈಶನ್‌ ಸೆಕ್ಯೂರಿಟೀಸ್ ಕಂಪೆನಿಯಲ್ಲಿ ಸಂಶೋಧನಾ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಛಾಬ್ರಾ, ಮೂರು ಬಾರಿ ರಹಸ್ಯ ಮಾಹಿತಿಗಳನ್ನು ತಮ್ಮ ಆತ್ಮಿಯ ಗೆಳೆಯ ಸಮೀರ್‌ ಪಟೇಲ್‌ಗೆ ರವಾನಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟನ್, ವಂಚನೆ, ನಿಯಮ ಉಲ್ಲಂಘನೆ