ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂಗಾರು ಮಳೆ ಭೀಕರವಾಗಿರುವ ಸಾಧ್ಯತೆಗಳಿವೆ:ವರದಿ (Monsoon Rain | Mohler | Agricultural meteorologist | AccuWeather)
Bookmark and Share Feedback Print
 
ಮುಂಬರುವ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಮುಂಗಾರು ಮಳೆ ಸಾಮಾನ್ಯವಾಗಿರಲಿದೆ. ಆದರೆ ಆರಂಭದಲ್ಲಿ ಮುಂಗಾರು ಮಳೆ ಭೀಕರವಾಗಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಸಂಸ್ಥೆಯೊಂದು ವರದಿ ಮಾಡಿದೆ.

ಮುಂಗಾರು ಅವಧಿ ಆರಂಭಕ್ಕೆ ಮುನ್ನ ಮೇ-ಜೂನ್ ತಿಂಗಳ ಅವಧಿಯಲ್ಲಿ, ಮಳೆ ಸಾಮಾನ್ಯವಾಗರಬಹುದು ಅಥವಾ ಯದ್ವಾತದ್ವಾವಾಗಿರಬಹುದು. ಆದರೆ ಜುಲೈ-ಅಗಸ್ಟ್ ತಿಂಗಳ ಅವಧಿಯಲ್ಲಿ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂದು ಪೆನಿಸುಲ್ವೆನಿಯಾ ಮೂಲದ ಅಕ್ಯುರೇಟ್ ವೆದರ್ ಸಂಸ್ಥೆಯ ಕೃಷಿ ಹವಾಮಾನ ತಜ್ಞರಾದ ದಲೆ ಮೊಹ್ಲರ್ ಹೇಳಿದ್ದಾರೆ.

ಭಾರತದಲ್ಲಿ ಶೇ.40 ರೈತರು ಮಾತ್ರ ನೀರಾವರಿ ಕೃಷಿಯನ್ನು ಹೊಂದಿದ್ದು, ಉಳಿದ ಶೇ.60ರಷ್ಟು ರೈತರು ಜೂನ್-ಜುಲೈ ತಿಂಗಳ ಅವಧಿಯಲ್ಲಿ ಬೆಳೆಗಳನ್ನು ಬೆಳೆಯಲು ಮುಂಗಾರು ಮಳೆಯ ಮೇಲೆ ಅವಲಂಬಿತರಾಗಿದ್ದಾರೆ.

ಕಳೆದ ವರ್ಷ ಮುಂಗಾರು ಮಳೆಯ ಕೊರತೆಯಿಂದಾಗಿ ದೇಶದ ಕೃಷಿ ಉತ್ಪನ್ನ ಕುಸಿತಗೊಂಡಿತ್ತು.ಆದರೆ ಭಾರತ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಸಮೀಕ್ಷೆಗಳು, ಪ್ರಸಕ್ತ ವರ್ಷದಲ್ಲಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ