ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐನಿಂದ ರೆಪೋ ದರಗಳಲ್ಲಿ ಅಲ್ಪ ಹೆಚ್ಚಳ ಸಾಧ್ಯತೆ (Reserve Bank | Borrowings | Monetary policy | Wheat | Sugar)
Bookmark and Share Feedback Print
 
ವಾರ್ಷಿಕ ಹಣದುಬ್ಬರ ದರ ಶೇ.10ಕ್ಕೆ ತಲುಪುವ ನಿರೀಕ್ಷೆಯಲ್ಲಿ, ಮಾರುಕಟ್ಟೆಯಲ್ಲಿ ನಗದು ಹರಿವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳು ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಕಡಿಮೆ ಅವಧಿಯ ಸಾಲದ ಮೇಲಿನ ಬಡ್ಡಿ ದರ ಹಾಗೂ ಠೇವಣಿಗಳ ಮೇಲೆ ಶೇ.0.25ರಷ್ಟು ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡುವ ನಿರೀಕ್ಷೆಗಳಿವೆ ಎಂದು ಬ್ಯಾಂಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ತಜ್ಞರ ಪ್ರಕಾರ, ಮೇ ತಿಂಗಳ ಮಧ್ಯ ಭಾಗದಲ್ಲಿ ಭತ್ತ, ಸಕ್ಕರೆ, ಆಲೂಗಡ್ಡಿ ಮತ್ತು ದ್ವಿದಳ ಧಾನ್ಯಗಳು ಮಾರುಕಟ್ಟೆಗೆ ಬರಲಿರುವುದರಿಂದ ದರಗಳಲ್ಲಿ ಇಳಿಕೆಯಾಗಲಿರುವುದರಿಂದ ಹಣದುಬ್ಬರ ದರ ಕೂಡಾ ಇಳಿಕೆಯಾಗಲಿರುವುದರಿಂದ ರೆಪೋ ದರಗಳಲ್ಲಿ ಅಲ್ಪ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಿರಂತರ ಹಣದುಬ್ಬರ ದರ ಏರಿಕೆಯಿಂದಾಗಿ, ರೆಪೋ ಮತ್ತು ರಿವರ್ಸ್ ರೆಪೋ ದರಗಳು ಹಾಗೂ ಕ್ಯಾಷ್ ರಿಸರ್ವ್ ರೇಶಿಯೋ ದರಗಳಲ್ಲಿ ಅಲ್ಪ ಹೆಚ್ಚಳವಾಗಲಿದೆ ಎಂದು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ.ವೈ.ಪ್ರಭು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ