ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 57.10 ಬಿನ್ ರೂ.ಗಳಿಗೆ ತಲುಪಿದ 3ಜಿ ಸ್ಪೆಕ್ಟ್ರಂ ಬಿಡ್ (3G bandwidth | Telecommunications | Bidders | Mobile services)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜು ಏಳನೇ ದಿನಕ್ಕೆ ತಲುಪಿದ್ದು, 40 ನೇ ಸುತ್ತಿನ ಹರಾಜಿನಲ್ಲಿ ಹರಾಜು ಮೊತ್ತ 57.10 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 3ಜಿ ತರಂಗಾಂತರಗಳ ಹರಾಜು ಮೀಸಲು ಮೊತ್ತವನ್ನು 35.00 ಬಿಲಿಯನ್‌ಗಳಿಗೆ ಸರಕಾರ ನಿಗದಿಪಡಿಸಿದೆ.

ದೇಶದ 22 ಸೇವಾ ವೃತ್ತಗಳಲ್ಲಿ ದೆಹಲಿ 6,26 ಬಿಲಿಯನ್ ರೂಪಾಯಿಗಳಿಗೆ ತಲುಪಿ ಅಗ್ರಸ್ಥಾನದಲ್ಲಿದೆ.ಮುಂಬೈ 5.99 ಬಿಲಿಯನ್ ರೂಪಾಯಿಗಳಿಗೆ ತಲುಪಿ ಎರಡನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಮುಂಬೈ ಆರಂಭಿಕ ಮೊತ್ತ 3.20 ಬಿಲಿಯನ್ ರೂಪಾಯಿಗಳಾಗಿತ್ತು.

ದಕ್ಷಿಣ ಭಾರತದಲ್ಲಿ ತಮಿಳುನಾಡು 5.49 ಬಿಲಿಯನ್ ರೂಪಾಯಿಗಳಿಗೆ ತಲುಪುವುದರೊಂದಿಗೆ ಮೂರನೇ ಸ್ಥಾನದಲ್ಲಿದೆ.ಮೂರು ಸೇವಾ ವಲಯಗಳ ರಾಜ್ಯಗಳಾದ ಒರಿಸ್ಸಾ, ಆಸ್ಸಾಂ ಮತ್ತು ಜಮ್ಮು ಕಾಶ್ಮಿರಗಳಲ್ಲಿ 3ಜಿ ಬಿಡ್‌ಗೆ ಏಳನೇ ದಿನದಂದು ಯಾವುದೇ ಬದಲಾವಣೆ ಕಂಡುಬರಲಿಲ್ಲ.

3ಜಿ ತರಂಗಾಂತರಗಳ ಬಿಡ್‌ನಲ್ಲಿ ಯಶಸ್ವಿಯಾದ ಹರಾಜುದಾರರು, ಸೆಪ್ಟೆಂಬರ್ 1ರಿಂದ ದೇಶಾದ್ಯಂತ ವಾಣಿಜ್ಯ ಸೇವೆಯನ್ನು ಒದಗಿಸಬಹುದಾಗಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ಭಾರ್ತಿ ಏರ್‌ಟೆಲ್ ಲಿಮಿಟೆಡ್, ರಿಲಯನ್ಸ್ ಕಮ್ಯೂನಿಕೇಶನ್ಸ್, ವೋಡಾಫೋನ್ ಎಸ್ಸಾರ್ ಮತ್ತು ಐಡಿಯಾ ಸೆಲ್ಯೂಲರ್ ಸೇರಿದಂತೆ ಒಂಬತ್ತು ಕಂಪೆನಿಗಳು 3ಜಿ ತರಂಗಾತರಗಳಿಗಾಗಿ ಬಿಡ್ ಸಲ್ಲಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ