ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದ್ಯುತ್ ಘಟಕ: ಬಿಎಚ್‌ಇಎಲ್‌ಗೆ 6,300 ಕೋಟಿ ರೂ. ಗುತ್ತಿಗೆ (BHEL | Power plant | Karnataka | RPCL)
Bookmark and Share Feedback Print
 
ಸರಕಾರಿ ಸ್ವಾಮ್ಯದ ಬಿಎಚ್‌ಇಎಲ್ ಕಂಪೆನಿ, ಕರ್ನಾಟಕದಲ್ಲಿ ವಿದ್ಯುತ್ ಘಟಕ ಸ್ಥಾಪನೆಗಾಗಿ 6,300 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಿಎಚ್‌ಇಎಲ್ ಸಂಸ್ಥೆ , ರಾಯಚೂರು ಪವರ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ 1,600 ಮೆಗಾ ವ್ಯಾಟ್ ವಿದ್ಯುತ್ ಘಟಕವನ್ನು ಸ್ಥಾಪಿಸಲು, 6,300 ಕೋಟಿ ರೂಪಾಯಿಗಳ ಗುತ್ತಿಗೆ ಬಿಡ್‌ ಪಡೆಯುವಲ್ಲಿ ಯಶಸ್ವಿಯಾಗಿದೆ.

ಗುತ್ತಿಗೆಯಲ್ಲಿ, ಪರಿಸರ ಸ್ನೇಹಿ ವಿದ್ಯುತ್ ಘಟಕದ ವಿನ್ಯಾಸ, ಇಂಜಿನಿಯರಿಂಗ್, ಸರಬರಾಜು, ಉತ್ಪಾದನೆ, 800 ಮೆಗಾ ವ್ಯಾಟ್‌ಗಳ ಟವರ್‌ಗಳ ನಿರ್ಮಾಣದ ಹೊಣೆಯನ್ನು ಬಿಎಚ್‌ಇಎಲ್ ಹೊತ್ತುಕೊಂಡಿದೆ.

ಆರ್‌ಪಿಸಿಎಲ್ ಕಂಪೆನಿ ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್‌ನ ಜಂಟಿ ಸಹಭಾಗಿತ್ವದ ಕಂಪೆನಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ