ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ : ಪ್ರತಿ 10ಗ್ರಾಂಗೆ 16,790 ರೂ. (Gold | Bullion | Silver)
Bookmark and Share Feedback Print
 
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಚಿನ್ನದ ದರದಲ್ಲಿ ಪ್ರತಿ 10ಗ್ರಾಂಗೆ 10 ರೂಪಾಯಿಗಳ ಕುಸಿತವಾಗಿ 16,790 ರೂಪಾಯಿಗಳಿಗೆ ತಲುಪಿದೆ.

ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣ ದರಗಳಲ್ಲಿ ಕೂಡಾ 10 ರೂಪಾಯಿ ಕುಸಿತವಾಗಿ ಕ್ರಮವಾಗಿ 16,790 ಮತ್ತು 16,640 ರೂಪಾಯಿಗಳಿಗೆ ತಲುಪಿದೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.4ರಷ್ಟು ದರದಲ್ಲಿ ಕುಸಿತ ಕಂಡು, 1,132.4 ಡಾಲರ್‌ಗಳಿಗೆ ತಲುಪಿದೆ.ಕಳೆದ ಏಪ್ರಿಲ್ 16 ರಿಂದ ಚಿನ್ನದ ದರದಲ್ಲಿ ಶೇ.1.9ರಷ್ಟು ಇಳಿಕೆಯಾಗಿದೆ.

ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 160 ರೂಪಾಯಿಗಳಷ್ಟು ಇಳಿಕೆಯಾಗಿ 26,890 ರೂಪಾಯಿಗಳಿಗೆ ತಲುಪಿದೆ.

ಏತನ್ಮಧ್ಯೆ, ಬೆಳ್ಳಿಯ ನಾಣ್ಯದ (100 ನಾಣ್ಯಗಳು) ದರದಲ್ಲಿ ಯಾವುದೇ ಬದಲಾವಣೆಯಾಗದೆ 33,500 ರೂಪಾಯಿಗಳಿಗೆ ಸ್ಥಿರವಾಗಿದೆ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಚಿನಿವಾರಪೇಟೆ, ಬೆಳ್ಳಿ