ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಪಿಎಲ್‌ ಸಂಪೂರ್ಣ ವಹಿವಾಟು ತನಿಖೆಗೆ ಆದೇಶ: ಮುಖರ್ಜಿ (IPL | Pranab Mukherjhee | Probe | Funding | Guilty)
Bookmark and Share Feedback Print
 
PTI
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಫಾಂಚೈಸಿಗಳ ಆರ್ಥಿಕ ಮೂಲಗಳು ಮತ್ತು ಬಂಡವಾಳ ಹೂಡಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ತರನ್ನು ಶಿಕ್ಷಿಸಲಾಗುವುದು ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಸಂಸತ್ತಿಗೆ ಭರವಸೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ಯಾವ ಯಾವ ಮೂಲಗಳಿಂದ ಬಂಡವಾಳ ಹೂಡಿಕೆ ಮಾಡಿದ ರೀತಿ, ಖರ್ಚು ವೆಚ್ಚಗಳ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಎಲ್ಲಾ ವಿವರಗಳು ಬಹಿರಂಗವಾಗಲಿವೆ ಎಂದು ಮುಖರ್ಜಿ ಲೋಕಸಭೆಗೆ ತಿಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ ಫಾಂಚೈಸಿಗಳು ಒಂದು ವೇಳೆ ವಂಚನೆ ಎಸಗಿರುವುದು ಪತ್ತೆಯಾದಲ್ಲಿ, ಅಂತಹವರನ್ನು ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು. ಸಂಪೂರ್ಣ ವಿವರಗಳು ಶೀಘ್ರದಲ್ಲಿ ಬಹಿರಂಗವಾಗಲಿವೆ ಎಂದು ಹೇಳಿದ್ದಾರೆ.

ಶಶಿ ತರೂರ್ ಅವರ ರಾಜೀನಾಮೆಯನ್ನು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಸ್ವೀಕರಿಸಿದ್ದಾರೆ ಎನ್ನುವ ಮಾಹಿತಿಯನ್ನು ಪಡೆದ ನಂತರ, ಲೋಕಸಭೆಗೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ