ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಸರ್ವ್ ಬ್ಯಾಂಕ್‌ನಿಂದ ರೆಪೋ ದರಗಳಲ್ಲಿ ಹೆಚ್ಚಳ (RBI | CRR | Inflation | Growth | Repo | Reverse repo)
Bookmark and Share Feedback Print
 
ಅಬಿವೃದ್ಧಿಗೆ ಮಾರಕವಾಗದೆ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್, ಇಂದು ನಡೆದ ಆರ್ಥಿಕ ಪರಿಷ್ಕರಣ ಸಭೆಯಲ್ಲಿ, ಸಾಲದ ಬಡ್ಡಿ ದರ ಹಾಗೂ ಠೇವಣಿಗಳ ಮೇಲೆ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿದೆ.

ರಿಸರ್ವ್ ಬ್ಯಾಂಕ್, ರೆಪೋ ರಿವರ್ಸ್ ರೆಪೋ ದರಗಳಲ್ಲಿ ಕ್ರಮವಾಗಿ ಶೇ.5.25 ಹಾಗೂ ಶೇ.3.75ರಷ್ಟು ಹೆಚ್ಚಳಗೊಳಿಸಿದೆ. ಏತನ್ಮಧ್ಯೆ, ಕ್ಯಾಶ್ ರಿಸರ್ವ್ ರೇಶಿಯೋ ದರದಲ್ಲಿ ಆರ್ಥಿಕ ತಜ್ಞರ ನಿರೀಕ್ಷೆಯಂತೆ ಶೇ.6ರಷ್ಟು ಹೆಚ್ಚಳಗೊಳಿಸಿದೆ.

ಸಿಆರ್‌ಆರ್ ದರ ಏರಿಕೆ ಏಪ್ರಿಲ್ 24ರಿಂದ ಜಾರಿಗೆ ಬರಲಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಿಂದ 12,500 ಕೋಟಿ ರೂಪಾಯಿಗಳ ಹೆಚ್ಚುವರಿ ನಗದು ಹರಿವು ನಿಯಂತ್ರಣವಾಗಲಿದೆ.

ಆದರೆ, ಬ್ಯಾಂಕ್‌ಗಳಲ್ಲಿ ನಗದು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ, ಶೀಘ್ರದಲ್ಲಿ ಬಡ್ಡಿ ದರ ಏರಿಕೆಯಿಲ್ಲ ಎಂದು ಬ್ಯಾಂಕಿಂಗ್ ಕ್ಷೇತ್ರದ ಅದಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ