ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತಟಸ್ಥ ಆರ್ಥಿಕ ನೀತಿಗೆ ಮರಳುವ ಸಮಯವಾಗಿದೆ: ಪ್ರಣಬ್ (Pranab Mukherjee | RBI | Hikes | Policy rate)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿದ್ದರಿಂದ, ತಟಸ್ಥ ಅಡಳಿತ ನೀತಿಗೆ ಮರಳುವ ಸಮಯವಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂದು ನಡೆಸಿದ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿ 5.25ಕ್ಕೆ ಸೀಮಿತಗೊಳಿಸಿದೆ. ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಗೊಳಿಸಿ ಶೇ.3.75ಕ್ಕೆ ನಿಗದಿಪಡಿಸಿದೆ.

ಕ್ಯಾಶ್ ರಿಸರ್ವ್ ರೇಶಿಯೋದಲ್ಲಿ, 25 ರಷ್ಟು ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿ ಶೇ.6ಕ್ಕೆ ಸೀಮಿತಗೊಳಿಸಿದ್ದರಿಂದ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 125 ಬಿಲಿಯನ್ ರೂಪಾಯಿಗಳಷ್ಟು ನಗದು ಹರಿವಿನ ಪ್ರಮಾಣದಲ್ಲಿ ಕುಸಿತವಾಗಲಿದೆ ಎಂದು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ದೇಶದ ಆರ್ಥಿಕತೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ, ತಟಸ್ಥ ನೀತಿಗಳತ್ತ ಮರಳುವ ಸಮಯವಾಗಿದೆ. ಆರ್‌ಬಿಐ ದರ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಆರ್ಥಿಕತೆ ಚೇತರಿಕೆಯಾಗುವ ವಿಶ್ವಾಸವಿದೆ ಎಂದು ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ