ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾಗತಿಕ ಆರ್ಥಿಕತೆಗೆ ಹಣದುಬ್ಬರ ಸವಾಲು: ಅಮೆರಿಕ (World | Economy | Inflation | Emerging markets)
Bookmark and Share Feedback Print
 
ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ.ವಿಶೇಷವಾಗಿ ಉದಯೋನ್ಮುಖ ರಾಷ್ಟ್ರಗಳಲ್ಲಿ ಹಣದುಬ್ಬರ ಸಮಸ್ಯೆ ತೀವ್ರವಾಗಿ ಪರಿಣಮಿಸಿದೆ ಎಂದು ಅಮೆರಿಕದ ಹಣಕಾಸು ಮಾರುಕಟ್ಟೆಯ ಮಾಜಿ ಅಧ್ಯಕ್ಷೆ ಹಾಗೂ ಸಲಹೆಗಾರ್ತಿ ಫಿಲಿಪ್ಪಾ ಮಾಲ್ಮ್‌ಗ್ರೆನ್ ಹೇಳಿದ್ದಾರೆ.

ಚೀನಾದಲ್ಲಿ ಹಣದುಬ್ಬರ ದರ ಠೇವಣಿ ದರಕ್ಕಿಂತ ಹೆಚ್ಚಳವಾಗಿದೆ.ಭಾರತದಲ್ಲಿ ಕೂಡಾ ಹಣದುಬ್ಬರ ಹೆಚ್ಚಳವಾಗಿದೆ.ಅಹಾರ, ಅಗತ್ಯ ವಸ್ತುಗಳ ದರ ಏರಿಕೆ ಮತ್ತು ಕೃಷಿ ಉತ್ಪನ್ನ ಕುಸಿತದಿಂದಾಗಿ, ಹಣದುಬ್ಬರ ಹೆಚ್ಚಳವಾಗಿದ್ದರಿಂದ ಆರ್‌ಬಿಐ ಬಡ್ಡಿ ದರಗಳಲ್ಲಿ ನಿರೀಕ್ಷೆಗಿಂತ ಹೆಚ್ಚಳ ಮಾಡಿದೆ ಎಂದು ತಿಳಿಸಿದ್ದಾರೆ.

ಪಾಶ್ಚಾತ್ಯ ರಾಷ್ಟ್ರಗಳು ಸಾಲದ ಹೊರೆಯಿಂದಾಗಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಗ್ರೀಸ್ ಪೊರ್ಚಗಲ್ ಮತ್ತು ಅಮೆರಿಕದಂತಹ ರಾಷ್ಟ್ರಗಳು ಕೂಡಾ ಆರ್ಥಿಕ ಸವಾಲನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ