ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜ-20 ಸಭೆಯಲ್ಲಿ ಗ್ರಾಮೀಣ ಯೋಜನೆ ವಿವರಣೆ: ಖರ್ಗೆ (Rural scheme | India | G-20 | Mallikarjun Kharge | Labour ministers)
Bookmark and Share Feedback Print
 
ಜಿ-20 ರಾಷ್ಟ್ರಗಳ ಕಾರ್ಮಿಕ ಸಚಿವರುಗಳ ಸಭೆಯಲ್ಲಿ, ದೇಶದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾದ ನ್ಯಾಷನಲ್ ರೂರಲ್ ಎಂಪ್ಯಾಯ್‌ಮೆಂಟ್ ಜನರೇಶನ್ ಯೋಜನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ್ ಖರ್ಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಕೇಂದ್ರ ಸರಕಾರದ ಮಹತ್ತರವಾದ. 100 ದಿನಗಳ ಗ್ರಾಮೀಣ ಅಭಿವೃದ್ಧಿ ಯೋಜನೆ ಪ್ರತಿಯೊಬ್ಬರ ನಿರೀಕ್ಷೆಗೆ ಮೀರಿ ಯಶಸ್ವಿಯಾಗಿದೆ ಎಂದು ಯುಎಸ್ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಮಹತ್ವ ಜಾರಿಗೆ ತಂದ ರೀತಿ ಸೇರಿದಂತೆ ಮಧ್ಯಮ ಹಾಗೂ ಬಡವರ್ಗದ ಜನತೆಗೆ ಅನೂಕುಲವಾಗುವ ನಿಟ್ಟಿನಲ್ಲಿ, ಜಾರಿಗೆ ತರಲು ಅಗತ್ಯವಾದ ರೂಪರೇಷೆಗಳನ್ನು ವಿವರಿಸಲಿದ್ದಾರೆ.

ಭಾರತದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ್ ಖರ್ಗೆ ವಿವರಣೆ ನೀಡಲಿದ್ದಾರೆ ಎಂದು ಅಮೆರಿಕದ ಅಂತಾರಾಷ್ಟ್ರೀಯ ವ್ಯವಹಾರಗಳ ಉಪಕಾರ್ಯದರ್ಶಿ ಸಾಂಡ್ರಾ ಪೊಲಸ್ಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ