ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೆಪೋ ದರಗಳ ಏರಿಕೆಯಿಂದ ಹಣದುಬ್ಬರ ನಿಯಂತ್ರಣ (Reserve Bank | Rate hikes | Inflation | Repo)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಿದ್ದರಿಂದ ಹಣದುಬ್ಬರ ದರ ನಿಯಂತ್ರಣವಾಗಲಿದೆ ಎಂದು ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ.

ಆರ್ಥಿಕ ಪರಿಷ್ಕರಣ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೆಪೋ ದರಗಳಲ್ಲಿ ತಲಾ 25 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದ್ದು, ಮುಂಬರುವ ಜುಲೈ 27ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಗೆ ಮುನ್ನ, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ನೀತಿಗಳಲ್ಲಿ ಕೆಲ ಬದಲಾವಣೆಯಿಂದಾಗಿ ಮಾರುಕಟ್ಟೆಗಳಲ್ಲಿ ನಗದು ಹರಿವು ನಿಯಂತ್ರಿಸಲು ಸಾಧ್ಯವಾಗಲಿದೆ. ಒಂದು ವೇಳೆ ಹಣದುಬ್ಬರ ನಿಯಂತ್ರಣವಾಗದಿದ್ದಲ್ಲಿ ಮುಂದಿನ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಮತ್ತಷ್ಟು ರೆಪೋ ದರಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಗವರ್ನರ್ .ಡಿ.ಸುಬ್ಬಾರಾವ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ