ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಸಿಎಲ್ ಟೆಕ್ನಾಲಾಜೀಸ್‌ಗೆ 262.57 ಕೋಟಿ ಲಾಭ (HCL Technologies | Software | outsourcing | Net profit)
Bookmark and Share Feedback Print
 
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್‌ ಟೆಕ್ನಾಲಾಜೀಸ್, ಮಾರ್ಚ್ 31ಕ್ಕೆ ಮೂರನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.72ರಷ್ಟು ಏರಿಕೆಯಾಗಿ 262.57 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಂಪೆನಿಯ ಒಟ್ಟು ಆದಾಯ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 1,287.11 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ ನಿವ್ವಳ ಆದಾಯ 1,048.90 ಕೋಟಿ ರೂಪಾಯಿಗಳಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಎಚ್‌ಸಿಎಲ್ ಅಡಳಿತ ಮಂಡಳಿ, ಶೇರುದಾರರಿಗೆ 2 ರೂಪಾಯಿ ಮುಖಬೆಲೆಯ ಶೇರಿಗೆ 1ರೂಪಾಯಿ ಮಧ್ಯಂತರ ಡೆವಿಡೆಂಡ್ ಘೋಷಿಸಿದೆ.

ಜಾಗತಿಕ ಮಟ್ಟದ ವಹಿವಾಟಿನಲ್ಲಿ ಚೇತರಿಕೆಯಾಗಿದ್ದರಿಂದ, ಸಾಫ್ಟ್‌ವೇರ್ ಕ್ಷೇತ್ರದ ಹೊರಗುತ್ತಿಗೆ ಕಂಪೆನಿಗಳ ವಹಿವಾಟಿನ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಎಚ್‌ಸಿಎಲ್ ಟೆಕ್ನಾಲಾಜೀಸ್ ಮುಖ್ಯಸ್ಥ ಶಿವ್ ನಡಾರ್ ತಿಳಿಸಿದ್ದಾರೆ.

ಮೂರನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿ, 7136 ಹೆಚ್ಚುವರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದು, ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 58,129ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ